ಆಧುನಿಕತೆಯು ಹೆಚ್ಚೆಚ್ಚು ಬೆಳವಣಿಯಿಂದಾಗಿ ಇಂದಿನ ಯುವ ಪೀಳಿಗೆಯವರು ಅದರೆಡೆಗೆ ಆಕರ್ಷಿತರಾಗುತ್ತಾ ಹಿಂದಿನಿಂದ ನಡೆದುಕೊಂಡು ಬಂದಿರುವಂತಹ ಅನೇಕ ಧಾರ್ಮಿಕ ಆಚರಣೆಗಳನ್ನು, ಹಬ್ಬ-ಹರಿದಿನಗಳಲ್ಲಿ ಪಾಲ್ಗೊಳ್ಳದೆ, ಧಾರ್ಮಿಕ ಆಚರಣೆಗಳನ್ನು ಮರೆಯುತ್ತಿರುವುದು ವಿಷಾದನೀಯ ಎಂದು ಸುನ್ನೀ ಧಾವತೆ ಇಸ್ಲಾಮಿ ಸಂಘಟನೆ ಮುಖ್ಯಸ್ಥರಾದ ಅಲ್ ಹಜ್ ಹಾಜ್ಮತ್ ಬೈ ತಿಳಿಸಿದರು.
ಹುಳಿಯಾರು ಪಟ್ಟಣದ ಜಾಮೀಯಾ ಶಾದಿ ಮಹಲ್ ನಲ್ಲಿ ರಂಜಾನ್ ಹಬ್ಬದ ಮಹತ್ವ ಕುರಿತ ವಿಶೇಷ ಉಪನ್ಯಾಸ ನೀಡಿದ ಅಲ್ ಹಜ್ ಹಾಜ್ಮತ್ ಬೈ ಅವರನ್ನು ಸನ್ಮಾನಿಸಲಾಯಿತು. |
ಹುಳಿಯಾರಿನ ಜಾಮೀಯಾ ಶಾದಿ ಮಹಲ್ ನಲ್ಲಿ ರಂಜಾನ್ ಹಬ್ಬದ ಮಹತ್ವ ಕುರಿತು ಮುಸ್ಲಿಂ ಯುವಕರು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ರಂಜಾನ್ ಹಬ್ಬದ ಮಹತ್ವ,ಅದನ್ನು ಆಚರಿಸುವ ರೀತಿನೀತಿಗಳ ಬಗ್ಗೆ ತಿಳಿಸಿದರು.
ದೇಶದ ಅಭಿವೃದ್ದಿಯಲ್ಲಿ ಯುವಶಕ್ತಿಯ ಪಾತ್ರ ಹೆಚ್ಚಾಗಿದ್ದು, ಯುವಪೀಳಿಗೆಯವರು ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಬೇಕಿದೆ ಎಂದರು. ತಂತ್ರಜ್ಞಾನದ ಹೊಸಹೊಸ ಆವಿಷ್ಕಾರದಡಿ ನಿತ್ಯ ಅತ್ಯಾಧಿನಿಕ ಉಪಕರಣಗಳು ಮಾರುಕಟ್ಟೆಗೆ ಬರುತ್ತಿದ್ದು ಜನರನ್ನು ಆಕರ್ಷಿಸುತ್ತಿವೆ.ಅದರಲ್ಲೂ ಮೊಬೈಲ್,ಇಂಟರ್ ನೆಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಇಂದಿನ ಯುವ ಪೀಳಿಗೆಯವರು ಹೆಚ್ಚೆಚ್ಚು ಬಳಸುತ್ತಾ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದರು. ರಂಜಾನ್ ಹಬ್ಬ ಮುಸ್ಲಿಂ ಜನಾಂಗದ ಪವಿತ್ರ ಹಬ್ಬವಾಗಿದ್ದು ಕುರಾನ್ ಪಠಣ, ನಮಾಜ್, ದಾನ ಇವುಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದರು.
ಮುಸ್ಲಿಂ ಯುವಕ ಸಂಘದ ಇಮ್ರಾಜ್ ಮಾತನಾಡಿ ಪ್ರತಿಯೊಬ್ಬರು ಸಹ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಸಾಗುತ್ತಾ ಮುಂದಿನ ಪೀಳಿಗೆಗೆ ಅದರ ಬಗ್ಗೆ ತಿಳಿಸಬೇಕು ಹಾಗೂ ಹಬ್ಬ ಹರಿದಿನಗಳನ್ನು ಆಚರಿಕೊಂಡು ಹೋಗುವುದರಿಂದ ಜನರ ನಡುವೆ ಪ್ರೀತಿ,ವಿಶ್ವಾಸ,ಶಾಂತಿ ನೆಲೆಯೂರುತ್ತದೆ, ಸಂಬಂಧಗಳು ಗಟ್ಟಿಯಾಗಿರುತ್ತವೆ ಎಂದರು. ರಂಜಾನ್ ಮುಸ್ಲಿಂರ ಪವಿತ್ರ ಹಬ್ಬಗಳಲ್ಲಿ ಒಂದಾಗಿದ್ದು ಅದರ ಆಚರಣೆಯನ್ನು ನಾವೆಲ್ಲರೂ ಒಟ್ಟಾಗಿ ಸೇರಿ ಆಚರಿಸೋಣವೆಂದು ಹಬ್ಬದ ಶುಭಾಷಯ ತಿಳಿಸಿದರು.ಸ್
ಈ ಸಂಧರ್ಭದಲ್ಲಿ ಜಾಮೀಯಾ ಮಸೀದಿ ಮುತವಲ್ಲಿ ಜಬಿವುಲ್ಲಾ, ಉರ್ದು ಶಾಲೆಯ ಶಿಕ್ಷಕ ಮುಜ್ ಮಿಲ್, ನಾಸೀರ್ ಬೇಗ್, ಸೈಯದ್ ನೂರ್, ಷಭಾಸ್ ಖಾನ್ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮಕ್ಕಳು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ