ಪಾದಚಾರಿಯೊಬ್ಬನಿಗೆ ಬೈಕ್ ಗುದ್ದಿದ ಪರಿಣಾಮ ಆತ ಸ್ಥಳದಲ್ಲೆ ಮೃತಪಟ್ಟು ಬೈಕ್ ಸವಾರರಿಗೆ ತೀವ್ರ ಗಾಯಗಳಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗ ದಾಖಲಿಸಿದ ಘಟನೆ ಭಾನುವಾರ ರಾತ್ರಿ 8.30 ರ ಸಮಯದಲ್ಲಿ ಕೆಂಚಮ್ಮನ ತೋಪಿನ ಬಳಿ ಸಂಭವಿಸಿದೆ.
ನಾಗಯ್ಯ (60) ಎಂಬಾತನೆ ಮೃತ ದುರ್ದೈವಿಯಾಗಿದ್ದು ಈತ ಪಟ್ಟಣದ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡಿತ್ತಿದ್ದು ರಾತ್ರಿ ಕೆಲಸ ಮುಗಿಸಿಕೊಂಡು ಹಳ್ಳಿಗೆ ತೆರಳುವಾಗ ಬೈಕ್ ಗುದ್ದಿ ಸಾವನಪ್ಪಿರುತ್ತಾನೆ. ಗಾಯಾಳುಗಳಾದ ಪರಪ್ಪ , ಶಿವಣ್ಣ ಅವರುಗಳನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಿದ್ದು, ಹಮಾಲಿ ಲಕ್ಷ್ಮಣನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.ಮೇಲ್ಕಂಡ ಎಲ್ಲರೂ ಲಿಂಗಪ್ಪನಪಾಳ್ಯದವರಾಗಿದ್ದು ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ