ಕಾನೂನಿನ ಅರಿವಿಲ್ಲದೆ ತಪ್ಪೆಸಗಿದರೂ ಕೂಡ ಅಪರಾಧವಾಗುವುದಿದ್ದು ಕಾನೂನಿನ ಅರಿವು ಅಗತ್ಯವಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿ ಹಂತದಿಂದಲೇ ಕಾನೂನು ಪಾಲನೆಯ ಬಗ್ಗೆ ಅಗತ್ಯ ಮಾಹಿತಿಗಳನ್ನು ಮಕ್ಕಳಿಗೆ ತಿಳಿಸುವುದರಿಂದ ಅವರು ಮುಂದಿನ ದಿನಗಳಲ್ಲಿ ಕಾನೂನಿನ ಉಲ್ಲಂಘನೆ ಮಾಡುವುದನ್ನು ತಪ್ಪಿಸಬಹುದಾಗಿದೆ ಎಂದು ಸಿವಿಲ್ ನ್ಯಾಯಾಧೀಶೆ ಎನ್.ವೀಣಾ ತಿಳಿಸಿದರು.
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ,ತಾ.ಪಂ.ಪೋಲಿಸ್ ಇಲಾಖೆ,ಕಂದಾಯ ಇಲಾಖೆಯ ಸಹಯೋಗದಲ್ಲಿ ಕಾನೂನು ಸಾಕ್ಷರಥ ಸಂಚಾರದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶೆ ಎನ್.ವೀಣಾ ಉದ್ಘಾಟಿಸಿದರು. |
ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ತಪ್ಪು ಮಾಡಿದವರಿಗೆ ಕಾನೂನಿನ ಚೌಕಟ್ಟಿನಲ್ಲಿ ತಕ್ಕಶಿಕ್ಷೆ ವಿಧಿಸಲಾಗುವುದಿದ್ದು, ತಪ್ಪೆಸಗಿದವರು ಕಾನೂನು ಕಣ್ಣಿನಿಂದ ಎಂದಿಗೂ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂದರು.ದೇಶದ ಮುಂದಿನ ಪ್ರಜೆಗಳಾದ ಮಕ್ಕಳಿಗೆ ಕಾನೂನು ಪಾಲನೆ ಬಗ್ಗೆ ಶಿಕ್ಷಕರು ತಿಳಿಸುವ ಮುಖಾಂತರ ಅವರುಗಳನ್ನು ಉತ್ತಮ ವ್ಯಕ್ತಿಗಳನ್ನಾಗಿಸ ಬೇಕೆಂದರು.
ಅಪರ ಸಿವಿಲ್ ನ್ಯಾಯಾಧೀಶ ಸೋಮನಾಥ್ ಮಾತನಾಡಿ, ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ,ಬಾಲಕಾರ್ಮಿಕ ಪದ್ದತಿ ಸೇರಿದಂತೆ ಅನೇಕ ಕಾರ್ಯಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಕಾನೂನುರಿತ್ಯಾ ಅಪರಾಧವಾಗಿದ್ದು ಮಕ್ಕಳ ಹಕ್ಕುಗಳ ರಕ್ಷಣೆ ಕಾಯ್ದೆಯಡಿ ಅಂತಹವರಿಗೆ ಶಿಕ್ಷೆವಿಧಿಸಬಹುದಾಗಿದೆ ಎಂದರು.
ಹಿರಿಯ ವಕೀಲ ಎಸ್.ಎಚ್.ಚಂದ್ರಶೇಖರಯ್ಯ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಹಾಗೂ ವಕೀಲ ಸಿ.ರಾಜಶೇಖರ್ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಉಪನ್ಯಾಸ ನೀಡಿದರು. ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಪಿಪಿ ರವಿಚಂದ್ರ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ಎನ್,ಕೃಷ್ಣಮೂರ್ತಿ,ಕಾರ್ಯದರ್ಶಿ ಎಚ್,ಟಿ.ಹನುಮಂತಯ್ಯ, ಮಾಜಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ವಿಶ್ವನಾಥ್, ಪಿಎಸ್ ಐ ವೈ.ಘೋರ್ಪಡೆ, ಪ್ರಾಂಶುಪಾಲ ರವಿ, ವಕೀಲರುಗಳಾದ ಗೋಪಾಲಕೃಷ್ಣ, ಕೆ.ಸಿ.ಬಸವರಾಜು, ಲೋಕೇಶ್ವರ್,ಷಡಾಕ್ಷರಿ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ