ದೇಶದೆಲ್ಲೆಡೆ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ದಿನೇ ದಿನೇ ಅತ್ಯಾಚಾರ ಹಾಗೂ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದ್ದು ಇಂತಹ ಪ್ರಕರಣಗಳನ್ನು ಖಂಡಿಸಿ ಹುಳಿಯಾರಿನ ಶಾಲಾಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಪ್ರಗತಿಪರ ಸಂಘಟನೆಯವರು ಒಟ್ಟಾಗಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಹುಳಿಯಾರಿನ ವಿವಿಧ ಶಾಲಾಕಾಲೇಜುಗಳ ವಿದ್ಯಾರ್ಥಿಗಳು ,ಪ್ರಗತಿಪರ ಸಂಘಟನೆಯವರು ಪಟ್ಟಣದ ರಾಮ್ ಗೋಪಾಲ್ ಸರ್ಕಲ್ ನಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು. |
ಪ್ರಸ್ತುತದಲ್ಲಿ ಬಾಲಕಿಯರ ಮತ್ತು ಮಹಿಳೆಯರ ಮೇಲೆ ಅಮಾನುಷವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟ ಬೇಕು. ಇಂತಹ ಕೃತ್ಯಗಳನ್ನು ಮಾಡೂವ ಅಪರಾಧಿಗಳನ್ನು ಹಿಡಿದು ಉಗ್ರ ಶಿಕ್ಷೆ ವಿಧಿಸಬೇಕು. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವ ಮೂಲಕ ಇಂಥ ಘಟನೆಗಳು ಮರುಕಳಿ ಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ದೇಶವ್ಯಾಪಿ ಈ ಬಗ್ಗೆ ಜಾಗೃತಿ ಆಂದೋಲನಗಳು ನಡೆಯಬೇಕಿದೆ ಹಾಗೂ ಮಹಿಳೆಯರ ಮೇಲೆ ಈ ರೀತಿ ದೌರ್ಜನ್ಯ ನಡೆಯುತ್ತಿದ್ದರೂ ಸಹ ಉಗ್ರ ಕಾನೂನು ಜಾರಿ ಮಾಡುವಲ್ಲಿ ಸರ್ಕಾರ ವಿಫಲಾಗುತ್ತಿದೆ ಎಂದು ದೂರಿದರು.
ಪಟ್ಟಣದ ಬಸ್ ನಿಲ್ದಾಣ,ರಾಜ್ ಕುಮಾರ್ ರಸ್ತೆ,ಬಿಎಚ್.ರಸ್ತೆ ಮೂಲಕ ಸಾಗಿದ ಮೆರವಣಿಗೆಯಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಗಳನ್ನು ತಡೆಗಟ್ಟುವಂತೆ ವಿದ್ಯಾರ್ಥಿ ಸಮೂಹ ಘೋಷಣೆಗಳನ್ನು ಕೂಗಿದರು. ನಂತರ ರಾಮ್ ಗೋಪಾಲ್ ಸರ್ಕಲ್ ನಲ್ಲಿ ಮಾನವ ಸರಪಳಿ ರಚಿಸಿ ಉಪತಹಶೀಲ್ದಾರ್ ಸತ್ಯನಾರಾಯಣ ಹಾಗೂ ಗ್ರಾಮಲೆಖ್ಖಿಗ ಶ್ರೀನಿವಾಸ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ