ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಕಾನೂನು ಅರಿವಿನ ಪಾಠದ ಅಗತ್ಯತೆಯಿದ್ದು, ಪ್ರತಿ ವಿದ್ಯಾರ್ಥಿಗಳು ಕಾನೂನು ಅರಿತು ಬಾಳುವುದರಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದು ಚಿ.ನಾ.ಹಳ್ಳಿ ನ್ಯಾಯಾಲಯದ ಅಭಿಯೋಜಕ ರವಿಚಂದ್ರನ್ ಕಿವಿಮಾತು ಹೇಳಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ,ತಾ.ಪಂ.ಪೋಲಿಸ್ ಇಲಾಖೆ,ಕಂದಾಯ ಇಲಾಖೆಯ ಸಹಯೋಗದಲ್ಲಿ ಕಾನೂನು ಸಾಕ್ಷರಥ ಸಂಚಾರದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮನ್ನು ಪಿಎಸೈ ಘೋರ್ಪಡೆ ಉದ್ಘಾಟಿಸಿದರು. |
ಪಿಎಸೈ ಘೋರ್ಪಡೆ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು ಆ ಸಮಯದಲ್ಲಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಮಾಡಬೇಕು ಎಂದರು. ಪ್ರಸ್ತುತದಲ್ಲಿ ಅಪ್ರಾಪ್ತವಯಸ್ಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿರುವುದು ಆತಂಕಕರ ಸಂಗತಿಯಾಗಿದೆ ಇದರಿಂದ ಶಾಂತಿ,ನೆಮ್ಮದಿಗೆ ಧಕ್ಕೆಯುಂಟಾಗಿ ಸಮಾಜದಲ್ಲಿ ಆಶಾಂತಿ ವಾತಾವರಣಾ ಸೃಷ್ಠಿಯಾಗುತ್ತಿದೆ ಎಂದರು.
ವಕೀಲ ಷಡಾಕ್ಷರಿ ಮಾತನಾಡಿ ಸಮಾಜದಲ್ಲಿನ ಭ್ರಷ್ಟಾಚಾರ ನಿರ್ಮೂನೆಯ ದೃಷ್ಠಿಯಿಂದ ಮಾಹಿತಿಹಕ್ಕು ಕಾಯ್ದೆಯಿದ್ದು ಸರ್ಕಾರದ ಯಾವುದೇ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರೆ ಆ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಸೂಕ್ತ ಮಾಹಿತಿ ಹಾಗೂ ದಾಖಲೆಗಳನ್ನು ಪಡೆಯಬಹುದಾಗಿದೆ ಇದನ್ನು ಪ್ರತಿಯೊಬ್ಬ ಪ್ರಜೆಯೂ ಪಡೆಯಬಹುದು ಎಂದರು.
ಪ್ರಾಂಶುಪಾಲ ನಟರಾಜು ಅಧ್ಯಕ್ಷತೆವಹಿಸಿದ್ದು,ವಕೀಲ ಮೋಹನ್ ಕುಮಾರ್ ಮೋಟಾರು ವಾಹನ ಕಾಯ್ದೆ ಬಗ್ಗೆ ತಿಳಿಸಿದರು.ವಕೀಲ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ,ಹನುಮಂತಯ್ಯ, ವಿಶ್ವನಾಥ್ ಸೇರಿದಂತೆ ಕಾಲೇಜು ಉಪನ್ಯಾಸಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ