ಹುಳಿಯಾರು ಹೋಬಳಿಯ ಕೆಂಕೆರೆ ಹಾಗೂ ಅಮಾನಿಕೆರೆಯಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಪಟ್ಟಣದ ಪೋಲಿಸರು ಸುಮಾರು 2,080ರೂ ನಗದು ಹಾಗೂ 10ಮಂದಿ ಜೂಜುಕೂರರನ್ನು ಬಂಧಿಸಿದ್ದಾರೆ.
ಪಿಎಸೈ ಘೋರ್ಪಡೆ ತಂಡ ಜೂಜು ನಡೆಯುತ್ತಿರುವುದರ ಬಗ್ಗೆ ಸೂಕ್ತ ಮಾಹಿತಿ ಕಲೆಹಾಕಿದ್ದು ಕೆಂಕೆರೆ ಗ್ರಾಮದಲ್ಲಿ ಜೂಜು ನಡೆಯುತ್ತಿದ್ದ ಅಡ್ಡೆಯ ಮೇಲೆ ದಾಳಿ ಮಾಡಿ 960ರೂ ನಗದು ಹಾಗೂ 4 ಮಂದಿಯನ್ನು ಹಾಗೂ ಅಮಾನಿಕೆರೆಯ ಮತ್ತೊಂದು ಅಡ್ಡೆಯಲ್ಲಿ ಜೂಜಾಡುತ್ತಿದ್ದ 6 ಮಂದಿ ಮತ್ತು 1,120ರೂ ನಗದನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ