ಹುಳಿಯಾರು ಹೋಬಳಿ ಜೋಡಿತಿರುಮಲಾಪುರದ ಶ್ರೀಕೊಲ್ಲಾಪುರ ಮಹಾಲಕ್ಷ್ಮಿ ಅಮ್ಮನವರ ಮಂಡಲ ಪೂಜೆ ಭಾನುವಾರದಂದು ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.
ಹುಳಿಯಾರು ಹೋಬಳಿ ಜೋಡಿತಿರುಮಲಾಪುರದ ಶ್ರೀಕೊಲ್ಲಾಪುರ ಮಹಾಲಕ್ಷ್ಮಿ ಅಮ್ಮನವರ ಮಂಡಲ ಪೂಜೆಯ ಅಂಗವಾಗಿ ನಡೆದ ಹೋಮಕಾರ್ಯಕ್ಕೆ ಪೂರ್ಣಾಹುತಿ ಅರ್ಪಿಸಲಾಯಿತು. |
ಶ್ರೀಕೊಲ್ಲಾಪುರ ಮಹಾಲಕ್ಷ್ಮಿ ಅಮ್ಮನವರ ನೂತನ ದೇವಾಲಯದ ವಿಮಾನ ಗೋಪುರ ಸ್ಥಾಪನೆ ಹಾಗೂ ಮಹಾಕುಂಭಾಭಿಷೇಕ ನೆರವೇರಿ 48 ದಿನಗಳಾದ ಪ್ರಯುಕ್ತ ಈ ಮಂಡಲ ಪೂಜೆ ನಡೆಸಲಾಗಿದ್ದು, ಭಾನುವಾರ ಮುಂಜಾನೆಯಿಂದಲೇ ಅಮ್ಮನವರಿಗೆ ಪಂಚಾಮೃತಾಭಿಷೇಕ,ಸಹಸ್ರನಾಮಾರ್ಚನೆ ನಡೆದು ಕಣ್ಮನ ಸೆಳೆಯುವಂತೆ ಅಲಂಕಾರ ಮಾಡಲಾಗಿತ್ತು, ಅರ್ಚಕರಾದ ಮಂಜುನಾಥ ಶರ್ಮ,ರವಿಶಾಸ್ತ್ರಿ,ಕೃಷ್ಣಮೂರ್ತಿ ಅವರ ಪೌರೋಹಿತ್ಯದಲ್ಲಿ ಗಣಹೋಮ ,ನವಗ್ರಹಹೋಮ, ಲಲಿತ ಹೋಮ ನೆರವೇರಿತು.ಸುಹಾಸಿನಿಯರಿಂದ ಲಲಿತಸಹಸ್ರನಾಮ ಪಠಿಸಲಾಯಿತು. ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನಡೆದ ನಂತರ ಆಗಮಿಸಿದ್ದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ