ನಲವತ್ತು ವರ್ಷಗಳ ಕಾಲ ಸುಧೀರ್ಘ ರಾಜಕೀಯದಲ್ಲಿರುವ ರಾಜ್ಯದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿರುವ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಟಿ.ಬಿ.ಜಯಚಂದ್ರ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಅಭಿಮಾನಿಗಳು ಒತ್ತಾಯಿಸಿದರು.
ಹುಳಿಯಾರಿನ ಕಾಂಗ್ರೆಸ್ ಕಾರ್ಯಕರ್ತರು ಟಿಬಿಜೆಯವರ 65 ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಪೊಲೀಸ್ ಠಾಣೆಯ ಸರ್ಕಲ್ ನಲ್ಲಿ ಮಂಗಳವಾರ ಆಚರಿಸಿದರು. |
ಪಟ್ಟಣದ ಪೊಲೀಸ್ ಠಾಣೆಯ ಸರ್ಕಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು , ಜಯಚಂದ್ರ ಅಭಿಮಾನಿಗಳು ಟಿ.ಬಿ.ಜಯಚಂದ್ರ ಅವರ 65 ನೇ ಹುಟ್ಟುಹಬ್ಬ ಆಚರಿಸಿ ಪಟಾಕಿ ಸಿಡಿಸಿ,ಕೇಕ್ ಕತ್ತರಿಸಿ,ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನ ಧನುಷ್ ರಂಗನಾಥ್ ಮಾತನಾಡಿ ಎರಡು ಬಾರಿ ಸಚಿವರಾಗಿ , ಶಾಸಕರಾಗಿರುವ ಟಿಬಿಜೆಯವರು ರಾಜ್ಯದ ಆಗುಹೋಗುಗಳ ಬಗ್ಗೆ ಸಮಗ್ರವಾಗಿ ತಿಳಿದಿದ್ದು, ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುವ ಶಕ್ತಿ ಅವರಿಗಿದ್ದು ಸಿಎಂ ಹಾಗೂ ಹೈಕಮಾಂಡ್ ನವರು ಟಿಬಿಜೆ ಅವರನ್ನು ರಾಜ್ಯದ ಡಿಸಿಎಂ ಆಗಿ ನೇಮಕಮಾಡಬೇಕು ಎಂದರು. ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿಕಾರ್ಯಗಳನ್ನು ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದು ಇಂದಿಗೂ ಸಹ ಸದಾಕಾಲ ರಾಜ್ಯದ ಹಿತಕ್ಕಾಗಿ ದುಡಿಯುತ್ತಿರುವ ಅವರಿಗೆ ಶೀಘ್ರವೇ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಬಡಗಿರಾಮಣ್ಣ ಮಾತನಾಡಿ ನೀರಾವರಿ ಹರಿಕಾರರಾಗಿ ಶಿರಾ ಹಾಗೂ ಚಿ.ನಾಹಳ್ಳಿ ಭಾಗದ ನೀರಿನ ಸಮಸ್ಯೆ ಬಗೆಹರಿಸಿರುವ, ಜಯಚಂದ್ರರಿಗೆ ಅನುಭವ ಹಿರಿತನದ ಆಧಾರದ ಮೇಲೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಹುಳಿಯಾರಿನ ಜಯಚಂದ್ರ ಅಭಿಮಾನಿಗಳು ಅವರ 65ನೇ ಹುಟ್ಟುಹಬ್ಬದ ಅಂಗವಾಗಿ ಮಂಗಳವಾರ ಆಸ್ಪತ್ರೆಯ ರೋಗಿಗಳಿಗೆ ಹಣ್ಣು,ಬ್ರೆಡ್ ವಿತರಿಸಿದರು.ಧನುಷ್ ರಂಗನಾಥ್, ದೇವಾನಂದ್,ಬಡಗಿರಾಮಣ್ಣ,ಪಟೇಲ್ ರಾಜಣ್ಣ ಇತರರಿದ್ದಾರೆ. |
ಎಲ್,ಆರ್.ಚಂದ್ರಶೇಖರ್ ಮಾತನಾಡಿ ಹುಟ್ಟಿದಹಬ್ಬದ ದಿನದಂದೂ ಸಹ ತಮ್ಮ ಕಾರ್ಯವನ್ನು ಎಂದಿನಂತೆ ಮಾಡುವಂತಹ ಧೀಮಂತ ವ್ಯಕ್ತಿ ಟಿಬಿಜೆಯವರಾಗಿದ್ದು, ಅವರಿಗೆ ಡಿಎಸಿಎಂ ಸ್ಥಾನ ನೀಡುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಲಭಿಸುತ್ತದೆ ಎಂದರು.
ದೇವಾನಂದ,ಪ್ರಸನ್ನಕುಮಾರ್,ವೆಂಕಟೇಶ್, ಮುರುಳಿ,ಪಟೇಲ್ ರಾಜಣ್ಣ,ಬಿ.ವಿ.ಶ್ರೀನಿವಾಸ್, ಪೈಲ್ವಾನ್ ಜಯಣ್ಣ,ಶಂಕರ್,ರಂಗನಾಥ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ