ಪಟ್ಟಣದ ಎಂಪಿಎಸ್ ಶಾಲಾ ಆವರಣದಲ್ಲಿ ಕೊಠಡಿಗಳಿಗೆ ಹೋಗುವ ದ್ವಾರದಲ್ಲಿಯೇ ದೊಡ್ಡ ಗುಂಡಿ ನಿರ್ಮಾಣಗೊಂಡಿರುವುದರಿಂದ ಮಕ್ಕಳು ಭೀತಿಯಲ್ಲಿ ಓಡಾಡುವಂತಾಗಿದೆ ಎಂದು ಪೋಷಕರು ದೂರಿದ್ದಾರೆ.
ಶಾಲಾ ಆವರಣದಲ್ಲಿ ಸುಮಾರು ಶತಮಾನ ದಾಟಿರುವ ಕಟ್ಟಡವಿದೆ. ಇದೇ ಕಟ್ಟಡದಲ್ಲಿ ಶಾಲಾ ಕಚೇರಿ ಹಾಗೂ ತರಗತಿ ಕೊಠಡಿಗಳಿವೆ. ಇಲ್ಲಿಗೆ ಹೋಗುವ ದ್ವಾರದಲ್ಲಿಯೇ ಸುಮಾರು 20 ಅಡಿ ಆಳದ ಗುಂಡಿಯನ್ನು ನಿರ್ಮಾಣ ಮಾಡಲಾಗಿದೆ. ಈ ಗುಂಡಿ ಯಾರು ನಿರ್ಮಾಣ ಮಾಡಿದ್ದಾರೆ ಎಂಬುದಕ್ಕೆ ಶಾಲಾ ಮುಖ್ಯಸ್ಥರು ಅಥವಾ ಬೇರೆ ಯಾರಿಂದಲೂ ಉತ್ತರವಿಲ್ಲ. ಅಂಗವಿಕಲ ಮಕ್ಕಳಿಗೆ ಓಡಾಡಲು ನಿರ್ಮಿಸಿರುವ ಸರಳ ಏರುಹಾಸು ಸಹ ಪಕ್ಕದಲ್ಲಿಯೇ ಇರುವುದು ಸಮಸ್ಯೆಗಳಿಗೆ ಕಾರಣವಾಗಿದೆ. ಆಯಕಟ್ಟಿನ ಜಾಗದಲ್ಲಿ ಗುಂಡಿ ನಿರ್ಮಾಣಗೊಂಡಿರುವುದರಿಂದ ಮಕ್ಕಳು ಹೋಗಿ ಬರುವ ಅಥವಾ ಆಟವಾಡುವ ವೇಳೆ ಎಲ್ಲಿ ಬೀಳುತ್ತಾರೆ ಎಂಬುದೇ ಶಿಕ್ಷಕರಿಗೂ, ಪೋಷಕರಿಗೂ ದೊಡ್ಡ ತಲೆ ನೋವಾಗಿದೆ. ಪಟ್ಟಣದಲ್ಲಿರು ಏಕೈಕ ಅತಿ ದೊಡ್ಡ ಆವರಣವಾಗಿದ್ದು ಸಾಕಷ್ಟು ಕಾರ್ಯಕ್ರಮಗಳು ಇಲ್ಲಿ ರಾತ್ರಿ ವೇಳೆ ನಡೆಯುತ್ತವೆ. ಬೆಳಗಿನ ವೇಳೆ ಜನರು ಗಾಳಿ ವಿಹಾರಕ್ಕೆ ಬರುವುದು, ರಜೆಯ ವೇಳೆ ಮಕ್ಕಳು ಇಲ್ಲಿಯೇ ಆಟವಾಡುತ್ತಿರುತ್ತಾರೆ. ಇಂತಹ ಸಮಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಗುಂಡಿಗೆ ಬೀಳುವುದು ಕಾಯಂ ಎಂದು ಸ್ಥಳಿಯರಾದ ಗಾಳಿದಿಬ್ಬ ಜಯಣ್ಣ ಆರೋಪಿಸುತ್ತಾರೆ. ಒಟ್ಟಾರೆ ಅವಘಡಗಳಿಗೆ ಕಾರಣವಾಗಿರುವ ಗುಂಡಿಯನ್ನು ನಿರ್ಮಾಣ ಮಾಡಿದವರು ಯಾರು, ಅದನ್ನು ಮುಚ್ಚುವವರು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಹುಳಿಯಾರು ಎಂಪಿಎಸ್ ಶಾಲಾ ಆವರಣದಲ್ಲಿ ಸದಾ ವಿದ್ಯಾರ್ಥಿಗಳು ಓಡಾಡುವ ಸ್ಥಳದಲ್ಲಿಯೇ ದೊಡ್ಡ ಗುಂಡಿ ನಿರ್ಮಾಣ ಮಾಡಿರುವುದು. |
ಶಾಲಾ ಆವರಣದಲ್ಲಿ ಸುಮಾರು ಶತಮಾನ ದಾಟಿರುವ ಕಟ್ಟಡವಿದೆ. ಇದೇ ಕಟ್ಟಡದಲ್ಲಿ ಶಾಲಾ ಕಚೇರಿ ಹಾಗೂ ತರಗತಿ ಕೊಠಡಿಗಳಿವೆ. ಇಲ್ಲಿಗೆ ಹೋಗುವ ದ್ವಾರದಲ್ಲಿಯೇ ಸುಮಾರು 20 ಅಡಿ ಆಳದ ಗುಂಡಿಯನ್ನು ನಿರ್ಮಾಣ ಮಾಡಲಾಗಿದೆ. ಈ ಗುಂಡಿ ಯಾರು ನಿರ್ಮಾಣ ಮಾಡಿದ್ದಾರೆ ಎಂಬುದಕ್ಕೆ ಶಾಲಾ ಮುಖ್ಯಸ್ಥರು ಅಥವಾ ಬೇರೆ ಯಾರಿಂದಲೂ ಉತ್ತರವಿಲ್ಲ. ಅಂಗವಿಕಲ ಮಕ್ಕಳಿಗೆ ಓಡಾಡಲು ನಿರ್ಮಿಸಿರುವ ಸರಳ ಏರುಹಾಸು ಸಹ ಪಕ್ಕದಲ್ಲಿಯೇ ಇರುವುದು ಸಮಸ್ಯೆಗಳಿಗೆ ಕಾರಣವಾಗಿದೆ. ಆಯಕಟ್ಟಿನ ಜಾಗದಲ್ಲಿ ಗುಂಡಿ ನಿರ್ಮಾಣಗೊಂಡಿರುವುದರಿಂದ ಮಕ್ಕಳು ಹೋಗಿ ಬರುವ ಅಥವಾ ಆಟವಾಡುವ ವೇಳೆ ಎಲ್ಲಿ ಬೀಳುತ್ತಾರೆ ಎಂಬುದೇ ಶಿಕ್ಷಕರಿಗೂ, ಪೋಷಕರಿಗೂ ದೊಡ್ಡ ತಲೆ ನೋವಾಗಿದೆ. ಪಟ್ಟಣದಲ್ಲಿರು ಏಕೈಕ ಅತಿ ದೊಡ್ಡ ಆವರಣವಾಗಿದ್ದು ಸಾಕಷ್ಟು ಕಾರ್ಯಕ್ರಮಗಳು ಇಲ್ಲಿ ರಾತ್ರಿ ವೇಳೆ ನಡೆಯುತ್ತವೆ. ಬೆಳಗಿನ ವೇಳೆ ಜನರು ಗಾಳಿ ವಿಹಾರಕ್ಕೆ ಬರುವುದು, ರಜೆಯ ವೇಳೆ ಮಕ್ಕಳು ಇಲ್ಲಿಯೇ ಆಟವಾಡುತ್ತಿರುತ್ತಾರೆ. ಇಂತಹ ಸಮಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಗುಂಡಿಗೆ ಬೀಳುವುದು ಕಾಯಂ ಎಂದು ಸ್ಥಳಿಯರಾದ ಗಾಳಿದಿಬ್ಬ ಜಯಣ್ಣ ಆರೋಪಿಸುತ್ತಾರೆ. ಒಟ್ಟಾರೆ ಅವಘಡಗಳಿಗೆ ಕಾರಣವಾಗಿರುವ ಗುಂಡಿಯನ್ನು ನಿರ್ಮಾಣ ಮಾಡಿದವರು ಯಾರು, ಅದನ್ನು ಮುಚ್ಚುವವರು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ