ಶ್ರಾವಣ ಮಾಸದ ಮೊದಲ ಹಬ್ಬವಾಗಿ ಮಂಗಳವಾರದಂದು ಸುಮಂಗಲಿಯರು ಮಂಗಳಗೌರಿ ವ್ರತ ಆಚರಿಸಿದರು.
ಪಾರ್ವತಿದೇವಿಯ ಕೃಪೆ ಸದಾ ನಮ್ಮಮೇಲಿದ್ದು, ಮುತ್ತೈದೆ ಭಾಗ್ಯ ಕಲ್ಪಿಸಲಿ ಎಂದು ಹೆಣ್ಣುಮಕ್ಕಳು ಈ ವ್ರತವನ್ನು ಆಚರಿಸುವ ಪರಿಪಾಠವಿದೆ. ಶ್ರಾವಣ ಮಾಸದ ಮೊದಲನೇ ಮಂಗಳವಾರದಿಂದ ಕಡೆ ಮಂಗಳವಾರದವರೆಗೆ ಬರುವ ನಾಲ್ಕು ಮಂಗಳವಾರವೂ ಈ ವ್ರತಾಚರಣೆ ನಡೆಯುತ್ತದೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಹೆಚ್ಚಾಗಿ ಈ ವ್ರತ ಆಚರಿಸುವುದಿದ್ದು, ಮುಂದಿನ ಐದು ವರ್ಷದ ವರೆಗೆ ವ್ರತವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ.
ಮಂಗಳಸ್ನಾನ ಮಾಡಿ ಗೌರಿವಿಗ್ರಹ ಪ್ರತಿಷ್ಠಾಪಿಸಿ,ಕಳಸ ಸ್ಥಾಪಿನೆ ಮಾಡಿ ಅಲಂಕರಿಸಿ ಪೂಜಿಸಲಾಗುತ್ತದೆ. ಮಹಾಮಂಗಳಾರತಿ ನಂತರ ಮಂಗಳಗೌರಿ ಕಥೆಯನ್ನು ಪಠನೆ ಮಾಡಿಸುವುದಲ್ಲದೆ, ಆಗಮಿಸಿದ ಮುತ್ತೈದೆಯರಿಗೆ ಫಲ ತಾಂಬೂಲ ಸಮರ್ಪಿಸಲಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ