ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದ ಹೊನ್ನಯ್ಯನಪಾಳ್ಯದ ಮದೇವಜ್ಜನ ಈಶ್ವರಯ್ಯಅವರ ತೋಟದ ಪಂಪ್ ಹೌಸ್ ನ ಗುಂಡಿಗೆ ಬುಧವಾರ ಮುಂಜಾನೆ ಬಿದಿದ್ದ ಕರಡಿಯನ್ನು ಮೇಲೆತ್ತಲು ನೆಡೆಸಿದ ಕಾರ್ಯಾಚರಣೆ ಫಲ ನೀಡಿದ್ದು ಕರಡಿ ಮರಿಗಳೊಂದಿಗೆ ತಡರಾತ್ರಿ ಸುರಕ್ಷಿತವಾಗಿ ಕಾಡು ಸೇರಿದೆ.
ಕಾಡಿನಿಂದ ಆಹಾರ ಅರಸಿ ತೋಟವೊಂದಕ್ಕೆ ಬಂದಿದ್ದ ಕರಡಿ ಹೊನ್ನಯ್ಯನಪಾಳ್ಯದ ಮದೇವಜ್ಜನ ಈಶ್ವರಯ್ಯನವರ ತೋಟದ ಪಂಪ್ ಹೌಸ್ ನ ಗುಂಡಿಯಲ್ಲಿ ತನ್ನ 2 ಮರಿಗಳೊಂದಿಗೆ ಬಿದ್ದಿತ್ತು. ತಾಯಿ ಕರಡಿಯೊಂದಿಗೆ ಎರಡು ಮರಿಗಳಿದ್ದರೂ ನೆನ್ನೆ ತಿಳಿದು ಬಂದಿರಲಿಲ್ಲ. ಅರಣ್ಯ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು ಬುಧವಾರ ಸಂಜೆ ಜಂಟಿ ಕಾರ್ಯಾಚರಣೆ ನಡೆಸಿ ಪಂಪ್ ಹೌಸ್ ಗುಂಡಿಗೆ ಏಣಿ ಹಾಕಿದ ಪರಿಣಾಮ ಮೇಲಕ್ಕೆ ಬಂದ ಕರಡಿ ತನ್ನ ಮರಿಗಳ ಸಮೇತ ಸುರಕ್ಷಿತವಾಗಿ ಕಾಡಿನ ಹಾದಿ ಹಿಡಿದಿದೆ ಎಂದು ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಶಾಂತರಾಜಯ್ಯ ಪತ್ರಿಕೆಗೆ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ