ಕೃಷಿ ಇಲಾಖೆವತಿಯಿಂದ ತೃಣಧಾನ್ಯ ಅಭಿವೃದ್ಧಿ ಯೋಜನೆಯಡಿ ನವಣೆ ವಿತರಿಸಲಾಗುತ್ತಿದೆ. ಈ ಯೋಜನೆಗೆ ಹೋಬಳಿಯ ಸೋಮನಹಳ್ಳಿ ಭಾಗದ ರೈತರನ್ನು ಆಯ್ಕೆ ಮಾಡಲಾಗಿದ್ದು, ಸುಮಾರು ಐವತ್ತು ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆಗೆ ಬೇಕಾಗುವಷ್ಟು ನವಣೆ ನೀಡಲಾಗುತ್ತಿದೆ. ಇದರ ಜೊತೆಗೆ ಮಣ್ಣಿನ ಫಲವತ್ತತೆಗೆ ಅವಶ್ಯ ಬೇಕಾದ ಜಿಪ್ಸಂ,ಜಿಂಕ್,ಬೋರೆಕ್ಸ್,ಹಂತ ಹಂತವಾಗಿ ಕೊಡಲಾಗುವುದಿದ್ದು ತಾ.ಪಂ.ಉಪಾಧ್ಯಕ್ಷ ಆರ್.ಪಿ.ವಸಂತಯ್ಯ ರೈತರೊಬ್ಬರಿಗೆ ನೀಡುವ ಮೂಲಕ ಶುಕ್ರವಾರ ಚಾಲನೆ ನೀಡಿದರು.
ಹುಳಿಯಾರು ಹೋಬಳಿ ಸೋಮನಹಳ್ಳಿ ಭಾಗದ ರೈತರಿಗೆ ಕೃಷಿ ಇಲಾಖೆವತಿಯಿಂದ ಉಚಿತವಾಗಿ ನವಣೆಬೀಜಗಳನ್ನು ವಿತರಿಸಲಾಯಿತು. |
ಈ ಭಾಗಕ್ಕೆ ಉತ್ತಮ ಮಳೆಯಾಗಿದ್ದು ವಾತಾವರಣ ನವಣೆ ಬೆಳೆಯಲು ಅನುಕೂಲಕರವಾಗಿದ್ದು ರೈತರು ಇದರ ಪ್ರಯೋಜನ ಪಡೆಯಬೇಕು ಎಂದರು.ಈ ಸಂಧರ್ಭದಲ್ಲಿ ಸಹಾಯಕ ಕೃಷಿ ಅಧಿಕಾರಿ ನೂರುಲ್ಲಾ, ತಾಲ್ಲೂಕು ಕೃಷಿಕ ಸಮಾಜದ ಕಾರ್ಯದರ್ಶಿ ರಂಗನಕೆರೆ ಮಹೇಶ್ ಸೇರಿದಂತೆ ರೈತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ