ರಂಜಾನ್ ಹಬ್ಬದ ನಿಮಿತ್ತ ಇಲ್ಲಿನ ಪೋಲಿಸ್ ಠಾಣೆಯಲ್ಲಿ ಸಿಪಿಐ ಜಯಕುಮಾರ್ ನೇತೃತ್ವದಲ್ಲಿ ಸಾರ್ವಜನಿಕ ಶಾಂತಿಸಭೆ ನಡೆಸಲಾಯಿತು.
ಹುಳಿಯಾರು ಠಾಣೆಯಲ್ಲಿ ರಂಜಾನ್ ಹಬ್ಬದ ಅಂಗವಾಗಿ ಸಿಪಿಐ ಜಯಕುಮಾರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಯಿತು. |
ಹಿಂದೂ ಹಾಗೂ ಮುಸ್ಲಿಂರು ಸಹೋದರರಂತೆ ನಡೆದುಕೊಳ್ಳಬೇಕು ಹಾಗೂ ಶಾಂತಿಕದಡುವಂತಹ ಯಾವುದೇ ರೀತಿಯ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಸಣ್ಣಪುಟ್ಟ ಅಹಿತಕರ ಘಟನೆ ನಡೆದಲ್ಲಿ ಸಮಾಜದ ಹಿರಿಯರು ಮುಂದಾಳತ್ವವಹಿಸಿ ಸಮಸ್ಯೆ ಬಗೆ ಹರಿಸಬೇಕೆ ಹೊರತು ಅದನ್ನು ಪ್ರಚೋದಿಸಿ ಸಮಸ್ಯೆ ಬಿಗಡಾಯಿಸಲು ಮುಂದಾಗಬಾರದು ಎಂದು ಸಿಪಿಐ ಜಯಕುಮಾರ್ ಮನವಿ ಮಾಡಿದರು.
ಪಿಎಸೈ ಘೋರ್ಪಡೆ ಮಾತನಾಡಿ ಹಬ್ಬಗಳಲ್ಲಿ ಮೆರವಣಿಗೆ ಸೇರಿದಂತೆ ಇನ್ನಿತ ಕಾರ್ಯಕ್ರಮಗಳನ್ನು ಕೈಗೊಳ್ಳುವಾಗ ಠಾಣೆಯ ಗಮನಕ್ಕೆ ತರಬೇಕು, ಮುಖಂಡರಾದವರು ಈ ಬಗ್ಗೆ ಹೆಚ್ಚಿನ ಗಮನ ಕೊಡಬೇಕು,ಯಾರೊಬ್ಬರು ಮತ್ತೊಬ್ಬರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುವಂತೆ ವರ್ತಿಸಬಾರದು. ಸಮಾಜ ಘಾತುಕ ಶಕ್ತಿಗಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕೆಂದು ಕೋರಿದರು ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ತಾವು ಅದಕ್ಕೆ ತಕ್ಕ ಕ್ರಮವನ್ನು ಕೈಗೊಳ್ಳುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಸಮಾಜದ ಮುಖಂಡರುಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು..
ಮುತುವಲ್ಲಿ ಜಬೀಉಲ್ಲಾ, ಮೀಸೆರಂಗಪ್ಪ,ಪೈಲ್ವಾನ್ ಜಯಣ್ಣ, ಹಿಂದೂ ಜಾಗರಣ ವೇದಿಕೆಯ ಬಡಗಿರಾಮಣ್ಣ, ಆರ್ಯವೆಶ್ಯ ಸಮಾಜದ ಅಧ್ಯಕ್ಷ ನಟರಾಜ್ ಗುಪ್ತ, ದಲಿತ ಸಹಾಯವಾಣಿಯ ಹನುಮಂತಪ್ಪ ಸೇರಿದಂತೆ ಹುಳಿಯಾರಿನ ಹಿಂದೂ ಹಾಗೂ ಮುಸ್ಲಿಂ ಸಮಾಜದ ವಿವಿಧ ಸಂಘಸಂಸ್ಥೆಗಳ ಮುಖಂಡರುಗಳು ಉಪಸ್ಥಿತರಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ