ಅಬ್ಕಾರಿ ನಿಯಮದಲ್ಲಿನ ಒಂದೇ ಒಂದು ಅಂಶ ಹೇಗೆ ಸಾರ್ವವಜನಿಕರ ಬವಣೆಗೆ ಕಾರಣವಾಗಿದೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಪಟ್ಟಣದ ಹುಳಿಯಾರಮ್ಮ ದೇವಸ್ಥಾನದ ಎದುರಿನ ಕೋ-ಅಪರೇಟೀವ್ ಸೊಸೈಟಿಯ ಮಳಿಗೆಯಲ್ಲಿರುವ ಮದ್ಯದಂಗಡಿಯ ವಿವಾದ.
ಹುಳಿಯಾರಿನ ಹುಳಿಯಾರಮ್ಮ ದೇವಸ್ಥಾನದ ಎದುರಿನ ಕೋ-ಅಪರೇಟೀವ್ ಸೊಸೈಟಿಯ ಮಳಿಗೆಯಲ್ಲಿನ ವಿವಾದಕ್ಕೀಡಾಗಿರುವ ಮದ್ಯದಂಗಡಿ. |
ಹೌದು,ದೇವಾಲಯಗಳ ಭಕ್ತರ ಹಾಗೂ ಸಾರ್ವಜನಿಕರ ನೆಮ್ಮದಿಗೆ ಭಂಗತಂದಿರುವ ಶ್ರೀನಿವಾಸ ವೈನ್ಸ್ ಆಕ್ಷೇಪಣಾರ್ಹ ಸ್ಥಳದಲ್ಲಿದ್ದರೂ ಕೂಡ ಸ್ಥಳಾಂತರಗೊಳಿಸದೆ ಕಾನೂನು ನಿಯಮಗಳಲ್ಲಿನ ಒಂದಂಶವನ್ನೆ ಎತ್ತಿಹಿಡಿದು ಸನ್ನದುದಾರರಿಗೆ ಅವಕಾಶ ಕಲ್ಪಿಸುತ್ತಾ ಬಂದಿರುವುದು ಸಮಸ್ಯೆಗೆ ಕಾರಣವಾಗಿದೆ
ಶತಮಾನ ಪೂರೈಸಿರುವ ಕೋ-ಅಪರೇಟೀವ್ ಸೊಸೈಟಿಗೆ ಸೇರಿದ ಮಳಿಗೆಯಲ್ಲಿ ಎನ್.ಜಿ.ನಾಗರಾಜು ಅವರ ರಂಗನಾಥ ಲಿಕ್ಕರ್ ಶಾಪ್ ಯಿದ್ದು ಜನನಿಬಿಡ ಪ್ರದೇಶದಲ್ಲಿರುವ ಇದನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ಇದನ್ನು ಸ್ಥಳಾಂತರಿಸಬೇಕೆಂಬುದು ದೇವಾಲಗಳ ಸಮಿತಿಯವರು ಹಾಗೂ ವಿವಿಧ ಸಂಘಟನೆಗಳ ಒತ್ತಾಯವಾಗಿತ್ತು. ಈ ಮದ್ಯದಂಗಡಿಗೆ ಗ್ರಾಮದೇವತೆ ಹುಳಿಯಾರಮ್ಮ ದೇವಾಲಯ 45ಮೀ ಅಂತರದಲ್ಲಿದ್ದು , 159 ಮೀ ದೂರದಲ್ಲಿ ಕೆಂಚಮ್ಮದೇವಿ ದೇವಾಲಯ,101 ಮೀ ದೂರದಲ್ಲಿ ಬೀರಲಿಂಗೇಶ್ವರಸ್ವಾಮಿ ಸನ್ನಿಧಿ,98 ಮೀ ಅಂತರದಲ್ಲಿ ರಂಗನಾಥಸ್ವಾಮಿ ದೇವಾಲಯಗಳಿವೆ.ಮದ್ಯದ ಅಂಗಡಿಯ ಪಕ್ಕದ ಕಟ್ಟಡದಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ಹಾಗೂ ಆಸ್ಪತ್ರೆಯಿದ್ದು, ವಾಣಿಜ್ಯ ಸ್ಥಳವಾದ ಈ ಜಾಗದಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುವುದರಿಂದ ಇದನ್ನು ಮುಂದಿನ ಅವಧಿಗೆ ನವೀಕರಿಸದೆ ಸ್ಥಳಾಂತರಿಸಬೇಕೆಂದು ಕಾನೂನು ಹೋರಾಟ ನಡೆದಿತ್ತು.
ನಿಯಮ: ಅಬಕಾರಿ ಸನ್ನದುಗಳ ನಿಯಮದಂತೆ ಸದರಿ ವೈನ್ ಶಾಪ್ ದೇವಾಲಯದಿಂದ ನೂರು ಮೀಟರ್ ಅಂತರದಲ್ಲಿದ್ದರೆ ನಡೆಸಲು ಅನುಮತಿಯಿದ್ದು,ನೂರು ಮೀಟರ್ ಅಂತರಕ್ಕು ಕಡಿಮೆಯಿದ್ದರೆ ಬೇರೊಂದು ನೀರಾಕ್ಷೇಪಣ ಸ್ಥಳಕ್ಕೆ ಸ್ಥಳಾಂತರಿಸಬೇಕಾಗುತ್ತದೆ.
ಆಗಿರುವುದೇನು: ಪಕ್ಕದಲ್ಲೇ ಇರುವ ಹುಳಿಯಾರಮ್ಮ ದೇವಾಲಯ ಮದ್ಯದಂಗಡಿಯಿಂದ 45ಮೀಟರ್ ಅಂತರದಲ್ಲಿದ್ದು ಹಾಗೂ ನಿಯಮಾನುಸಾರ ಸನ್ನದ್ದನ್ನು ರದ್ದು ಪಡಿಸಬೇಕಾಗುತ್ತದೆ. ಆದರೆ ತಕರಾರು ತೆಗೆದಿರುವ ದೇವಾಲಯ ಸಮಿತಿಯು ನಿಯಮಾನುಸಾರ ನೋಂದಣಿಯಾಗಿಲ್ಲ,ಆದ್ದರಿಂದ ಇದಕ್ಕೆ ಮಾನ್ಯತೆಯಿಲ್ಲ ಎಂದಿರುವ ಇಲಾಖೆಯು ಮುಜುರಾಯಿ ಇಲಾಖೆಗೆ ಒಳಪಡುವ ರಂಗನಾಥಸ್ವಾಮಿ ದೇವಾಲಯದ ಅರ್ಜಿಯನ್ನು ಮಾತ್ರ ಪರಿಗಣಿಸಿದೆ. ರಂಗನಾಥಸ್ವಾಮಿ ದೇವಾಲಯಕ್ಕು ಅಂಗಡಿಗೂ 100 ಮೀಟರ್ ಗೂ ಹೆಚ್ಚಿದ್ದು ಮದ್ಯದ ಅಂಗಡಿಗೆ ಅವಕಾಶಕೊಡಿ ಎಂಬುದು ಸನ್ನದುದಾರರ ಅಹವಾಲಾಗಿದೆ.
ಹುಳಿಯಾರಮ್ಮ ಹಾಗೂ ಬೀರಲಿಂಗೇಶ್ವರ ದೇವಾಲಯ ಕಡೆಗಣಿಸಿರುವ ಇಲಾಖೆಯ ಕ್ರಮ ಸನ್ನದುದಾರರ ಹಿತಕಾಯುವ ಅಡ್ಡದಾರಿಯಾಗಿದೆ ಎಂದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಇದರ ಮುಂದುವರಿದ ಭಾಗವಾಗಿ ಸಮಿತಿಯ ಸದಸ್ಯರುಗಳು ಅಬ್ಕಾರಿ ಸಚಿವರನ್ನು ಹಾಗೂ ಆಯುಕ್ತರನ್ನು ಭೇಟಿ ಮಾಡಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದರ ಹಿನ್ನಲೆಯಲ್ಲಿ ಅರ್ಜಿದಾರರ ಸಮ್ಮುಖದಲ್ಲಿ ಮತ್ತೊಮ್ಮೆ ಸ್ಥಳ ಪರೀಕ್ಷೆ ನಡಿಸಿ ಮರುಆಳತೆ ಮಾಡುವಂತೆ ಅಬಕಾರಿ ಉಪಆಯುಕ್ತರಿಗೆ ಸೂಚಿಸಲಾಗಿದ್ದು ಈ ಪ್ರಕಾರ ಮಂಗಳವಾರದಂದು ಎಲ್ಲಾ ಅರ್ಜಿದಾರರು ಹಾಗೂ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿರುವಂತೆ ಸೂಚಿಸಲಾಗಿದೆ.
ಹುಳಿಯಾರಿನ ಕೋ-ಅಪರೇಟೀವ್ ಸೊಸೈಟಿಯ ಮಳಿಗೆಯಲ್ಲಿನ ಮದ್ಯದಂಗಡಿಯನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ಸಂಘಸಂಸ್ಥೆಯವರು ಅಬಕಾರಿ ಸಚಿವರಿಗೆ ಮನವಿ ಸಲ್ಲಿಸಿರುವುದು. |
ಮದ್ಯದಂಗಡಿ ಪರವಾನಿಗೆಗೆ ಕೇವಲ ಎರಡು ಮೀಟರ್ ಆಳತೆ ವ್ಯತ್ಯಾಸವಿದ್ದು , ಆಳತೆಯನ್ನು ಯಾವ ಭಾಗದಿಂದ ಮತ್ತು ಹೇಗೆ ಮಾಡುತ್ತಾರೆಂಬುದರ ಮೇಲೆ ಮದ್ಯದಂಗಡಿ ನಡೆಯುತ್ತದೊ , ಇಲ್ಲವೊ ಎಂಬುದು ತಿರ್ಮಾನವಾಗಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ