ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಪಾಕ್ಷಿಕ ಕವಿಕಾವ್ಯಗೋಷ್ಠಿ ಕಾರ್ಯಕ್ರಮ ಹೋಬಳಿಯ ಯಳನಡು ಗ್ರಾಮದ ವೈ.ಎಸ್. ಉಮಾಮಹೇಶ್ ಅವರ ನಿವಾಸದಲ್ಲಿ ನಡೆಯಿತು.
ನಿವೃತ್ತ ಉಪನ್ಯಾಸಕ ತ.ಶಿ.ಬಸವಮೂರ್ತಿ ಅವರು ಜಾನಪದ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸದಲ್ಲಿ ಜಾನಪದ ಹುಟ್ಟು,ಬೆಳವಣಿಗೆ ಹಾಗೂ ಅದರ ಪ್ರಭಾವದ ಬಗ್ಗೆ ವಿವರವಾಗಿ ತಿಳಿಸಿದರು. ಅಲ್ಲದೆ ಭಾಗೀರತಿಯ ಕೆರೆಗೆಹಾರ ಜಾನಪದಕಥೆ,ಹೆಣ್ಣಿಗೆ ತವರುಮನೆಯ ಮೇಲಿನ ಅಕ್ಕರೆ,ಮಗಳಿಗೆ ತಾಯಿ ಬುದ್ದಿಹೇಳುವ ಪರಿ,ಗಂಡನಮೇಲೆ ಮಡದಿಯ ಅಭಿಮಾನ, ಒಡಹುಟ್ಟಿದವರಲ್ಲಿನ ಪ್ರೀತಿ,ತ್ಯಾಗ ಸೇರಿದಂತೆ ಇನ್ನಿತರ ವಿಷಯಗಳನ್ನು ಒಳಗೊಂಡಂತ ಜಾನಪದ ಸಾಹಿತ್ಯದ ಕೆಲ ತ್ರಿಪದಿಗಳನ್ನು ಹಾಡೂವ ಮೂಲಕ ಅವುಗಳ ಸಾರವನ್ನು ವಿವರಿಸಿದರು.
ನಿವೃತ್ತ ಹಿಂದಿಶಿಕ್ಷಕ ಬಿ.ಸಿ.ಲಿಂಗರಾಜಪ್ಪ ಅಧ್ಯಕ್ಷತೆವಹಿಸಿದ್ದು,ಜನಪದರ ಬದುಕನ್ನು ನಾವಿಂದು ಸ್ಮರಿಸುತ್ತಾ ಅದರು ಹೇಳಿದಂತೆ ವಿಷಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಬದುಕನು ಸಾರ್ಥಕ ಮಾಡಿಕೊಳ್ಳಬೇಕಿದೆ ಎಂದರು. ಸಾಹಿತ್ಯ ಪರಿಷತ್ ನ ಯಲ್ಲಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಮಾಮಹೇಶ್ ಸ್ವಾಗತಿಸಿ,ಕುಮಾರಿ ಪಲ್ಲವಿ ಪ್ರಾರ್ಥಿಸಿ, ದಯಾನಂದ್ ನಿರೂಪಿಸಿ, ನಾರಾಯಣಪ್ಪವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ