ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ಹುಳಿಯಾರು ಜಿಲ್ಲೆಯ ಅತಿದೊಡ್ಡ ಗ್ರಾಮಪಂಚಾಯ್ತಿಯೆಂಬ ಖ್ಯಾತಿ ಹೊಂದಿದೆ.ಪಟ್ಟಣ ಪಂಚಾಯ್ತಿಯಾಗಲು ಅರ್ಹತೆ ಹೊಂದಿರುವ ಹುಳಿಯಾರ್ ಈಗಾಗಲೆ ಪಟ್ಟಣ ಪಂಚಾಯ್ತಿಯಾಗಬೇಕಿದ್ದರೂ ಅನಿವಾರ್ಯವಾಗಿ ತಡವಾಗಿದೆ ಈ ಬಗ್ಗೆ ತಾವು ಗಮನಹರಿಸಿದ್ದು ಹುಳಿಯಾರು ಶೀಘ್ರವೇ ಪ.ಪಂಯಾಗಿ ಮೇಲ್ದರ್ಜೆಗೆರಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜಯಚಂದ್ರ ಭರವಸೆ ನೀಡಿದ್ದಾರೆ.
ಹುಳಿಯಾರನ್ನು ಪ.ಪಂ.ಯನ್ನಾಗಿಸುವಲ್ಲಿ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಗ್ರಾ.ಪಂ.ಯ ಸದಸ್ಯರನ್ನೊಳಗೊಂಡ ನಿಯೋಗ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. |
ಸಚಿವರ ಪತ್ರ. |
ಆದರೆ ಸದನದಲ್ಲಿ ತುಮಕೂರು ಹೊರತು ಪಡಿಸಿ ಮಿಕ್ಕೆಲ್ಲಾ ಜಿಲ್ಲೆಯ ಗ್ರಾ.ಪಂ. ಮೇಲ್ದರ್ಜೆಗೇರಿಸುವ ಕುರಿತು ನಡವಳಿಕೆ ನಡೆದಿದ್ದು, ಹುಳಿಯಾರಿನ ಬಗ್ಗೆ ಪ್ರಸ್ತಾಪವಾಗದಿರುವುದನ್ನು ಅರಿತ ಇಲ್ಲಿನ ಗ್ರಾ.ಪಂ.ಸದಸ್ಯರಾದ ಅಶೋಕ್ ಬಾಬು,ಹುಳಿಯಾರು ಬ್ಲಾಕ್ ಕಾಂಗ್ರೆಸ್ ನ ಓಬಿಸಿ ಅಧ್ಯಕ್ಷ ಧನುಶ್ ರಂಗನಾಥ್,ರಾಘವೇಂದ್ರ,ಹೇಮಂತ್ ಮತ್ತು ಪಟಾಕಿ ಶಿವಣ್ಣ ಸದಸ್ಯರನ್ನೊಳಗೊಂಡ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ದಿ ಸಚಿವರನ್ನು ಗುರುವಾರದಂದು ಭೇಟಿ ಮಾಡಿದ್ದಾರೆ.
ಈ ಸಂಬಂಧ ಜಿಲ್ಲಾಯೋಜನಾಧಿಕಾರಿ ಗೀತಾ ಅವರಿಂದ ಪಡೆದ ದಾಖಲೆಗಳನ್ನು ಕಾನೂನು ಸಚಿವ ಜಯಚಂದ್ರ ಅವರಿಗೆ ನೀಡಿ ಆಗುಹೋಗುಗಳ ಬಗ್ಗೆ ತಿಳಿಸಿ ಪಟ್ಟಣ ಪಂಚಾಯ್ತಿಗೆ ಮೇಲ್ದರ್ಜೆಗೇರಿಸಲು ಮನವಿ ಮಾಡಿದ್ದಾರೆ.
ಪರಿಶೀಲನೆಯ ನಂತರ ಸಚಿವ ಜಯಚಂದ್ರ ಹುಳಿಯಾರನ್ನು ಪ.ಪಂ.ಗೆ ಉನ್ನತೀಕರಿಸಲು ನಗರಾಭಿವೃದ್ದಿ ಸಚಿವ ವಿನಯ್ ಕುಮಾರ್ ಸೊರಕೆ ಅವರಿಗೆ ನಡವಳಿ ಪತ್ರ ನೀಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡುವಂತೆ ತಿಳಿಸಿರುತ್ತಾರೆ.
ನಗರಾಭಿವೃದ್ದಿ ಸಚಿವರು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದು ಭೇಟಿ ಮಾಡಿದ ತಂಡಕ್ಕೆ ಶೀಘ್ರ ಹುಳಿಯಾರು ಗ್ರಾಪಂ ಅನ್ನು ಪಟ್ಟಣ ಪಂಚಾಯ್ತಿಗೆ ಉನ್ನತೀಕರಿಸುವ ಆಶ್ವಾಸನೆ ನೀಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ