ಹುಳಿಯಾರು ಪಟ್ಟಣದ ಎಂಪಿಎಸ್ ಶಾಲಾ ಆವರಣದಲ್ಲಿ ಶಾಲಾಕೊಠಡಿಯ ಮುಂಭಾಗದಲ್ಲೇ ಮಕ್ಕಳು ಹೋಗುವ ಜಾಗದಲ್ಲೇ ದೊಡ್ಡ ಗುಂಡಿ ತೆಗೆಯಲಾಗಿದ್ದು ಸ್ಪಲ್ಪ ಎಚ್ಚರ ತಪ್ಪಿದರು ಬೀಳುವ ಸಾಧ್ಯತೆಯಿದ್ದು ಮಕ್ಕಳು ಭಯದಿಂದ ಓಡಾಡುವಂತಾಗಿದೆ ಎಂದು ಪೋಷಕರು ದೂರಿದ್ದಾರೆ.
ಹುಳಿಯಾರು ಎಂಪಿಎಸ್ ಶಾಲೆಯ ಕೊಠಡಿಯ ದ್ವಾರದಲ್ಲಿ ದೊಡ್ಡ ಗುಂಡಿ ನಿರ್ಮಾಣ ಮಾಡಿರುವುದು. |
ಎಂಪಿಎಸ್ ಶಾಲಾ ಕಟ್ಟಡದಲ್ಲಿ ಮಕ್ಕಳು ತರಗತಿ ಕೋಣೆಗೆ ಹೋಗುವ ದ್ವಾರದಲ್ಲಿಯೇ ಸುಮಾರು 20 ಅಡಿ ಆಳದ ಗುಂಡಿಯನ್ನು ನಿರ್ಮಾಣ ಮಾಡಲಾಗಿದೆ. ಈ ಗುಂಡಿ ಏತಕ್ಕಾಗಿ ಯಾರಿಂದ ಯಾವಾಗ ತೆಗೆದರು ಎಂಬುದು ಶಾಲಾ ಮುಖ್ಯಸ್ಥರಿಗು ತಿಳಿದಿಲ್ಲ. ಮಕ್ಕಳು ಹೋಗಿ ಬರುವ ಅಥವಾ ಆಟವಾಡುವ ವೇಳೆ ಎಲ್ಲಿ ಬೀಳುತ್ತಾರೆ ಎಂಬ ಆತಂಕದಿಂದ ಶಿಕ್ಷಕರಿಗೆ ಕಾಡುತ್ತಿದೆ. ಆಡುವ ಅಥವಾ ಓಡಾಡುವ ಸಮಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಗುಂಡಿಗೆ ಬೀಳುವುದು ಕಾಯಂ ಆಗಿದ್ದು ಅವಘಡಗಳಿಗೆ ಕಾರಣವಾಗಿರುವ ಗುಂಡಿಯನ್ನು ಕೂಡಲೇ ಮುಚ್ಚಿಸಬೇಕೆಂದು ಪೋಷಕರುಗಳು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ