ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪಾಠ ಹೇಗೆ ಮುಖ್ಯವೂ ಅದರಂತೆ ಅವರ ಶಾರೀರಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಆಟೋಟಗಳು ಅಷ್ಟೇ ಮುಖ್ಯವಾಗುತ್ತವೆ ಎಂದು ಜಿಲ್ಲಾ ಪ್ರಾಥಮಿಕಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ ತಿಳಿಸಿದರು.
ಹುಳಿಯಾರಿನ ಎಂಪಿಎಸ್ ಶಾಲಾ ಮೈದಾನದಲ್ಲಿ ಮರೆನಡುಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವತಿಯಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ಬಿ ವಿಭಾಗದ ಎರಡು ದಿನಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹುಳಿಯಾರಿನ ಎಂಪಿಎಸ್ ಶಾಲಾ ಮೈದಾನದಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಆರ್.ಪರಶಿವಮೂರ್ತಿ ಉದ್ಘಾಟಿಸಿದರು. |
ಪ್ರತಿಯೊಂದು ಆಟದಲ್ಲಿ ಸೋಲು-ಗೆಲುವು ಎನ್ನುವುದು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಗೆದ್ದವರು ಬೀಗದೆ , ಸೋತವರು ಚಿಂತಿಸದೆ ಮುನ್ನಡೆಯಬೇಕು ಹಾಗೂ ಶಾಲಾ ಕಾಲೇಜುಗಳಲ್ಲಿ ಆಯೋಜಿಸುವ ಇಂತಹ ಕ್ರೀಡಾಕೂಟಗಳಲ್ಲಿ ಮಕ್ಕಳು ಸ್ವಯಂಪ್ರೇರಣೆಯಿಂದ ಭಾಗವಹಿಸಬೇಕು ಎಂದರು. ಹೋಬಳಿ ಮಟ್ಟದಲ್ಲಿ ಗೆದ್ದವರಿಗೆ ತಾಲ್ಲೂಕು,ಜಿಲ್ಲಾ,ರಾಜ್ಯಮಟ್ಟದ ಕ್ರಿಡಾಕೂಟದಲ್ಲಿ ಭಾಗವಹಿಸಬಹುದಾಗಿದ್ದು ಕ್ರೀಡಾಪಟುಗಳು ಶ್ರದ್ಧೆಯಿಂದ ಆಟಗಳನ್ನಾಡುತ್ತಾ, ಶಾಲೆಗೆ,ಊರಿಗೆ ಕೀರ್ತಿ ತನ್ನಿ ಎಂದು ಕಿವಿಮಾತು ಹೇಳಿದರು.
ಸಿಆರ್ ಪಿ ಪ್ರೇಮಲೀಲಾ ಮಾತನಾಡಿ ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಕ್ರೀಡಾಕೂಟ ಸೂಕ್ತವೇದಿಕೆಯಾಗಿದೆ.ಅಲ್ಲದೆ ಪ್ರತಿಭೆಯೆಂಬುದು ಪ್ರತಿಯೊಂದು ಮಗುವಿನಲ್ಲಿ ಸುಪ್ತವಾಗಿರುತ್ತದೆ ಕ್ರಿಡಾಕೂಟ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಅದನ್ನು ಪ್ರದರ್ಶಿಸುವಂತೆ ತಿಳಿಸಿದರಲ್ಲದೆ ಕ್ರಿಡಾಪಟುಗಳಿಗೆ ಶುಭಹಾರೈಸಿದರು.
ನರಸಿಂಹಮೂರ್ತಿ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು.ಶಾಲಾ ಎಸ್ಡಿಎಂಸಿಯ ಅಧ್ಯಕ್ಷ ಲಿಂಗರಾಜು,ಎಂಪಿಎಸ್ ಶಾಲೆಯ ನಂದವಾಡಗಿ,ಮರೆನಾಡುಪಾಳ್ಯದ ಮುಖ್ಯಶಿಕ್ಷಕ ಹೊನ್ನಪ್ಪ, ಕ್ಲಸ್ಟರ್ ಮಟ್ಟದ ಸಿ.ಆರ್.ಪಿಗಳು,ಶಾಲಾ ಶಿಕ್ಷಕರು ಉಪಸ್ಥಿತರಿದ್ದ ಕ್ರೀಡಾಕೂಟದಲ್ಲಿ ಶಿಕ್ಷಕ ಹನುಮಂತರಾಜ್ ಸ್ವಾಗತಿಸಿ,ನಿರೂಪಿಸಿ,ಮೃತ್ಯುಂಜಯ ವಂದಿಸಿದರು. ಕ್ರೀಡಾಕೂಟಕ್ಕೆ ಭಾಗವಹಿಸಿದ್ದ ಕ್ರೀಡಾಳುಗಳಿಂದ ಕಾರ್ಯಕ್ರಮಕ್ಕು ಮುನ್ನಾ ಪಥಸಂಚನ ನಡೆಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ