ಇಂದು ಬೆಳಿಗ್ಗೆ ಯಾಕೋ ಬೇಜಾರಿನಲ್ಲಿದ್ದ ಸೀನಪ್ಪನ್ನ(ಚಿರುಮುರಿ ಶ್ರೀನಿವಾಸ್ B.V) ಏಕಪ್ಪ,ಏನಾಯ್ತು ಅಂದೆ.ಇಮ್ಮ ಸೋನು ಹೋಗ್ಬಿಟ್ಟ.ನಮ್ಗೇನೂ ಕೈ ಕಾಲೆ ಆಡ್ತಾಯಿಲ್ಲ ಅಂತಂದಾಗ ಗಾಬರಿಯಾಯ್ತು.
ಅಯ್ಯೋ ಪಾಪ ಅಂತ ಮುಂದೆ ವಿಚಾರಿಸಿದಾಗ ತಿಳಿದಿದ್ದು ಅದು ನಮ್ಮ ಸೀನಪ್ಪ ಸಾಕಿದ ಸಾಕು ನಾಯಿ ಅಂತ.ಅವರ ಕುಟುಂಬಕ್ಕೆ ಇದು ಸೇರ್ಪಡೆಯಾಗಿ ಹದಿನಾಲ್ಕು ವರ್ಷವಾಗಿತ್ತಂತೆ.ಕುಟುಂಬದ ಸದಸ್ಯನೆ ಆಗಿದ್ದ ಅದನ್ನು ಪ್ರಾಣಿ ಅಂತ ಯಾರೂ ಪರಿಗಣಿಸಿರಲಿಲ್ಲ.ತುಂಬಾ ಪ್ರೀತಿಯಿಂದ ಪೋಷಿಸುತ್ತಿದ್ದರು.ಅದರ ಚೇಷ್ಟೆಗೆ ಮನೆಯವರೂ ಯಾವತ್ತೂ ಬೇಸರ ಮಾಡಿಕೊಳ್ಳದೆ ಇನ್ನಿಲ್ಲದಂತೆ ಪ್ರೀತಿಯಿಂದ ಸಾಕಿದ್ದರು.ಮನೆಯ ಕಾವಲಿನ ಕೆಲಸ ಮಾತ್ರ ಚಾಚೂ ತಪ್ಪದೆ ಮಾಡ್ತಿದ್ದ ಅದು ಯಾರನ್ನೂ ಒಳಗೆ ಬಿಟ್ಟುಕೊಳ್ತಿರಲಿಲ್ಲ.ಬೀದಿಯೆಲ್ಲ ಕೇಳುವ ಹಾಗೆ ಬೊಗುಳ್ತಿತ್ತೆ ವಿನಾ ಯಾರನ್ನೂ ಕಚ್ತಿರಲಿಲ್ಲ.ಹಾಗಾಗೆ ಅದು ಎಲ್ಲರ ಪ್ರೀತಿ ಪಾತ್ರಕ್ಕೆ ಕಾರಣವಾಗಿತ್ತು.
ಬೆಳಿಗ್ಗೆ ವಾಕಿಂಗ್,ಸಂಜೆ ವಾಕಿಂಗ್ ಗೆ ಅದುಯಿರ್ಲೆ ಬೇಕಿತ್ತು. ಅದನ್ನು ಮನೆ ಕಾಯಲು ನೇಮಿಸಿಕೊಂಡ ಪ್ರಾಣಿಯಾಗದೆ ಪ್ರೀತಿಪಡೆಯಲು ಇದ್ದ ಜೀವಿಯಾಗಿತ್ತು.ಅದಕ್ಕೆ ಎಲ್ಲರ ಭಾಷೆ ಅರ್ಥವಾಗ್ತಿತ್ತು.ದೂರದೂರಿನಲ್ಲಿರುವ ಮಕ್ಕಳು ಫೋನ್ ಮಾಡಿದಾಗಲಂತೂ ಸಂಭಾಷಣೆಯಲ್ಲಿನ ಧ್ವನಿ ಆಲಿಸಿ ಮೈ ಮೇಲೆ ಎಗರಿ ಅವರನ್ನು ಜ್ಞಾಪಿಸಿಕೊಳ್ತಿತ್ತು. ಕಳೆದ 14 ವರ್ಷದಿಂದ ಜೊತೆಗಾರನಾಗಿದ್ದ ಈ ಸೋನು ಕಳೆದ ಮೂರು ದಿನಗಳಿಂದ ಜ್ವರಪೀಡೀತನಾಗಿ ನಾನ್ನಿನ್ನು ಹೊರಟ್ಟೆ ಅಂತ ಸೂಚನೆಕೊಟ್ಟಿತ್ತು.ಇಂದು ಬೆಳಿಗ್ಗೆ ಮೂಕರೋದನೆಯೊಂದಿಗೆ ಸೀನಪ್ಪನ ಕುಟುಂಬಕ್ಕೆ ವಿದಾಯ ಹೇಳಿತು.
ಪ್ರೀತಿಯ ನಾಯಿಯ ಸಾವು ಕುಟುಂಬವನ್ನು ಆಘಾತಕ್ಕೀಡುಮಾಡಿದೆ.ನಾಯಿ ಕಳೆದುಕೊಂಡ ನೋವು ಸೀನಪ್ಪನಲ್ಲಿ ಎದ್ದುಕಾಣ್ತಿತ್ತು.ತಮ್ಮೊಂದಿಗೆ ಬಾಳಿನ ಬಂಡಿಯಲ್ಲಿ ಸಹಭಾಗಿಯಾಗಿದ್ದ ಸೋನುಗೆ ಪೂಜೆ ಸಲ್ಲಿಸಿ ಅಂತ್ಯ ಸಂಸ್ಕಾರ ನೆರವೇರಿಸಿರುವ ಸೀನಪ್ಪ ಇನ್ನೂ ಅದರ ನೆನಪಿನಲ್ಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ