ಮಾನವ ತನ್ನ ಜೀವನದಲ್ಲಿ ನೆಮ್ಮದಿ ಬದುಕನ್ನು ಬಾಳಬೇಕಾದರೆ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ತುಮಕೂರಿನ ಶ್ರೀರಾಮಕೃಷ್ಣಾಶ್ರಮದ ವಿರೇಶಾನಂದ ಸರಸ್ವತಿ ಸ್ವಾಮೀಜಿಯವರು ತಿಳಿಸಿದರು
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಶುಕ್ರವಾರ ಆಯೋಜಿಸಿದ್ದ ಶೈಕ್ಷಣಿಕ ಮಾರ್ಗದರ್ಶಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ನೈತಿಕ ಶಿಕ್ಷಣ ಕುರಿತು ಉಪನ್ಯಾಸ ನೀಡಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಶ್ರೀರಾಮಕೃಷ್ಣಾಶ್ರಮದ ವಿರೇಶಾನಂದ ಸರಸ್ವತಿ ಸ್ವಾಮೀಜಿಯವರು ನೈತಿಕ ಶಿಕ್ಷಣ ಕುರಿತು ಉಪನ್ಯಾಸ ನೀಡಿದರು. |
ವಿದ್ಯಾರ್ಥಿ ಜೀವನದಲ್ಲಿ ಅಂಕಪಟ್ಟಿಯೊಂದೆ ಮಾನದಂಡವಾಗದೆ ಆತ್ಮವಿಶ್ವಾಸ,ಆತ್ಮಗೌರವ,ಆತ್ಮನಿಯಂತ್ರಣ,ಆತ್ಮಸಮರ್ಥನೆ,ಆತ್ಮಾವಾಲೋಕನ ಎಂಬ ಪಂಚಶೀಲ ಸೂತ್ರಗಳನ್ನು ಅಳವಡಿಸಿಕೊಂಡವನು ಮಾತ್ರ ನಿಜವಾದ ವಿದ್ಯಾವಂತನಾಗುತ್ತಾನೆ ಎಂದರು.
ವಿದ್ಯಾರ್ಥಿ ಜೀವನದಲ್ಲಿ ಏನು ಕಲಿಯುತ್ತಾರೋ ಅದು ಅವರ ಮುಂದಿನ ಜೀವನವನ್ನು ರೂಪಿಸಿಸುತ್ತದೆ. ಈ ನಿಟ್ಟಿನಲ್ಲಿ ನೈತಿಕ ಶಿಕ್ಷಣವೆಂಬುದು ಇಂದಿನ ವಿದ್ಯಾರ್ಥಿ ಸಮೂಹಕ್ಕೆ ಅಗತ್ಯವಾಗಿದೆ ಎಂದರು.ಕಟ್ಟಡಕ್ಕೆ ಬುನಾದಿ ಎಷ್ಟು ಮುಖ್ಯವೋ, ವಿದ್ಯಾರ್ಥಿಜೀವನದ ನೈತಿಕತೆಯೂ ಅಷ್ಟೇ ಮುಖ್ಯವಾಗಿದೆ ಇಲ್ಲವಾದರೆ ಜೀವನದಲ್ಲಿ ಸದಾಕಾಲ ಮತ್ತೊಬ್ಬರ ಹಂಗಿನಲ್ಲಿ ಬದುಕನ್ನು ಸಾಗಿಸಬೇಕಾಗುತ್ತದೆ . ಆದ್ದರಿಂದ ನೈತಿಕ ಮೌಲ್ಯಗಳನ್ನು ಅರಿತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಜೀವನವನ್ನು ನಡೆಸುವಂತೆ ಆಶಿಸಿದರು.
ಪ್ರಸ್ತುತದಲ್ಲಿ ನೆಪ ಮಾತ್ರಕ್ಕೆ ಪರೀಕ್ಷೆಗಳು ನಡೆಯುತ್ತಿವೆಯೇ ಹೊರತು ಮಕ್ಕಳಲ್ಲಿ ಉತ್ತಮ ಗುಣಮಟ್ಟ ತುಂಬುವಲ್ಲಿ ವಿಫಲವಾಗಿವೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಬರಿ ಪುಸ್ತಕದ ವಿಚಾರಗಳನ್ನು ತಿಳಿಸುವುದಷ್ಟಕ್ಕೆ ಮಾತ್ರ ಸೀಮಿತ ಮಾಡದೆ ಸಮಾಜದ ಬಗೆಗಿನ ವಿಚಾರಗಳನ್ನು ತಿಳಿಸಿ ಉತ್ತಮ ಪ್ರಜೆಗಳಾಗು ರೂಪಗೊಳ್ಳುವಂತೆ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.
ಮಕ್ಕಳಿಗೆ ಬೋಧನೆ ಮಾಡುವ ಶಿಕ್ಷಕರಿಗೂ ನಿರಂತರ ಕಲಿಕೆಯ ಅಗತ್ಯವಿದ್ದು, ಎಲ್ಲಾ ವಿಷಯಗಳನ್ನು ಪರಾಮರ್ಶಿಸಿ ಅರಿವುಂಟು ಮಾಡಿಕೊಂಡಾಗ ಉತ್ತಮ ಬೋಧನೆ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಡಿ.ಇಂದಿರಾ,ಎಸ್ಡಿಎಂಸಿ ಉಪಾಧ್ಯಕ್ಷ ರಂಗನಕೆರೆಮಹೇಶ್,ನಿವೃತ್ತಶಿಕ್ಷಕರಾದ ತ.ಶಿ.ಬಸವಮೂರ್ತಿ,ಎಸ್.ಜಿ. ಚಿಕ್ಕಣ್ಣ, ಕುಮಾರಸ್ವಾಮಿ,ಮುಖ್ಯಶಿಕ್ಷಕ ಬಸವಲಿಂಗಯ್ಯ, ಎಸ್ಡಿಎಂಸಿಯ ಜಾಫರ್,ಉಪನ್ಯಾಸಕ ಶಿವರುದ್ರಯ್ಯ,ಶಶಿಭೂಷಣ್ ಸೇರಿದಂತೆ ಇತರರ ಶಿಕ್ಷಕರು ಉಪಸ್ಥಿತರಿದ್ದು ಸಂಗೀತ ಶಿಕ್ಷಕ ಸುಭಾಷ್ ಪಾಟೀಲ್ ಪ್ರಾರ್ಥಿಸಿ, ಕುಮಾರಸ್ವಾಮಿ ಸ್ವಾಗತಿಸಿ ಮನ್ಸೂರ್ ಅಹಮದ್ ನಿರೂಪಿಸಿ,ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ