ಆಷಾಢ ಮಾಸದ ಕೊನೆಯ ಅಮವಾಸ್ಯೆಯಂದು ಭೀಮನ ಅಮವಾಸ್ಯೆಯನ್ನು ಹೆಣ್ಣು ಮಕ್ಕಳು ಸಂಭ್ರಮದಿಂದ ಆಚರಿಸಿದರು.
ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ ಹಾಗೂ ಪತಿಯ ಆರೋಗ್ಯ ಆಯುಷ್ಯ ಮತ್ತು ಓಜಸ್ಸು ವೃದ್ಧಿಗಾಗಿ , ತಮ್ಮನ್ನು ದೀರ್ಘಸುಮಂಗಲಿಯನ್ನಾಗಿಸುವಂತೆ ಕೋರಿ ಪೂಜಿಸುವ ಹಬ್ಬವೇ ಭೀಮನ ಅಮವಾಸ್ಯೆ. ಆಷಾಢ ಮಾಸದ ಕಡೆ ಅಮವಾಸ್ಯೆಯೆಂದು ಆಚರಿಸಲಾಗುವ ಈ ಪೂಜೆಯನ್ನು ಗಂಡನಪೂಜೆ ಎಂದು ಕರೆಯಲಾಗುತ್ತದೆ. ಮದುವೆಯಾದ ನಂತರ ಹೆಣ್ಣುಮಕ್ಕಳು ಒಂಭತ್ತು ವರ್ಷ ಈ ವರ್ಷ ವ್ರತಮಾಡುವ ಪದ್ಧತಿಯಿದ್ದು ಹೊಸಿಲ ಮೇಲೆ ಭಂಡಾರವಿಟ್ಟು ಸಹೋದರರಿಂದ ಹೊಡೆಸಿ ದಕ್ಷಿಣೆ ಕೊಡುವ ಪದ್ಧತಿ ಇದೆ. ಇದರ ಅಂಗವಾಗಿ ಜ್ಯೋತಿಭೀಮೇಶ್ವರ ವ್ರತ ಆಚರಣೆ ಮಾಡಲಾಗುತ್ತದೆ.. ಭೀಮನ ಅಮವಾಸ್ಯೆ ಮರುದಿನ ಶ್ರಾವಣ ಮಾಸ ಆರಂಭವಾಗಲಿದ್ದು, ಇನ್ನು ಸಾಲುಸಾಲು ಹಬ್ಬಗಳು ಪ್ರಾರಂಭವಾಗುತ್ತವೆ.
ಭೀಮನ ಅವಮಾಸ್ಯೆ ಪೂಜೆಯಲ್ಲಿ ತೊಡಗಿಕೊಂಡಿರುವ ಹೆಣ್ಣುಮಗು. |
ದೇವಾಲಯಗಳಲ್ಲಿ : ಹೋಬಳಿ ಕೆಂಕೆರೆ ಗ್ರಾಮದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಶನಿವಾರದಂದು ಭೀಮನವಮಾಸ್ಯೆ ಅಂಗವಾಗಿ ರಂಗನಾಥಸ್ವಾಮಿಯ ಮೂಲ ವಿಗ್ರಹಕ್ಕೆ ಅಭಿಷೇಕ,ಅರ್ಚನೆ ನಡೆಸಲಾಯಿತು.
ಶನಿವಾರ ಮುಂಜಾನೆಯಿಂದ ಈಶ್ವರಯ್ಯ ಹಾಗೂ ಚನ್ನಬಸವಯ್ಯನವರ ಪೌರೋಹಿತ್ಯದಲ್ಲಿ ಸ್ವಾಮಿಗೆ ಪಂಚಾಮೃತಾಭಿಷೇಕ,ಬಿಲ್ಚಾರ್ಚನೆ,ಸಹಸ್ರನಾಮಾರ್ಚನೆ,ತುಳಸಿ ಪತ್ರೆ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ, ನಂತರ ಮಹಾಮಂಗಳಾರತಿ ನಡೆದು ಆಗಮಿಸಿದ್ದ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು. ದೇವರಿಗೆ ವಿಶೇಷವಾಗಿ ಅಲಂಕರಿಸಲಾಗಿದ್ದು ಭಕ್ತಾಧಿಗಳು ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾದರು. ಈ ಸಂಧರ್ಭದಲ್ಲಿ ದೇವಾಲಯ ಸಮಿತಿಯವರು ಸೇರಿದಂತೆ ಭಕ್ತಾಧಿಗಳಿದ್ದರು. ಇದೇ ದಿನ ಸಂಜೆ ರಂಗನಾಥಸ್ವಾಮಿ ಭಜನಾ ಮಂಡಳಿಯವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಹುಳಿಯಾರಿನ ಗಣಪತಿ ದೇವಾಲಯ,ಕಾಳಿಕಾಂಭದೇವಾಲಯ,ಬನಶಂಕರಿ ದೇವಾಲಯಗಳಲ್ಲಿ ಅಮವಾಸ್ಯೆ ಅಂಗವಾಘಿ ವಿಶೇಷ ಪೂಜೆ ನೆರವೇರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ