ಹುಳಿಯಾರು ಹೋಬಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪಟ್ಟಣದ ಎಂಪಿಎಸ್ ಶಾಲಾ ಮೈದಾನದಲ್ಲಿ ಹೆಗ್ಗೋಡಿನ ಜನಮನದಾಟ ಕಲಾತಂಡದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಖಾಸಗಿ ಜೀವನ ಕುರಿತ ನಾಟಕವನ್ನು ಶನಿವಾರ ರಾತ್ರಿ ಮನೋಜ್ಞವಾಗಿ ಆಭಿನಯಿಸಿದರು.
ಹುಳಿಯಾರಿನ ಎಂಪಿಎಸ್ ಶಾಲಾವರಣದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಜೀವನ ಕುರಿತ ನಾಟಕಾಭಿನದ ಉದ್ಘಾಟನೆಯಲ್ಲಿ ವಿವಿಧ ಸಂಘಟನೆಯವರು ಉಪಸ್ಥಿತರಿದ್ದರು. |
ಏನಿದು ನಾಟಕ: ಗಣೇಶ್ ಹೆಗ್ಗೋಡ್ ನಿರ್ದೇಶನದ ಈ ನಾಟಕದ ಮುಖಾಂತರ ಅಂಬೇಡ್ಕರ್ ಅವರ ಖಾಸಗಿ ಜೀವನ ಮತ್ತು ಸಮಾಜದ ಬಗ್ಗೆ ಅವರಿಗಿದ್ದ ಒಳನೋಟ ಅವರ ಓದಿನ ಹಸಿವು , ಬರಹದ ಬಗ್ಗೆ ಇದ್ದ ತೀವ್ರತೆಯನ್ನು ಪ್ರೇಕ್ಷಕರ ಮುಂದೆ ಬಿಚ್ಚಿಡಲಾಯಿತು. ಗಾಂಧೀಜಿ ಮತ್ತು ಅಂಬೇಡ್ಕರ್ ಒಟ್ಟಿಗೆ ಕುಳಿತು ಮಾತನಾಡುವ ದೃಶ್ಯ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು. ಇತಿಹಾಸ ತನ್ನನ್ನು ಎಂದಿಗೂ ಕಡೆಗಣಿಸಲು ಸಾಧ್ಯವಿಲ್ಲ, ನಾವು ಯುದ್ದ ಗೆದ್ದಾಗಿದೆ ಆದರೆ ಯುದ್ದ ಇನ್ನು ಮುಗಿದಿಲ್ಲ ಎಂದು ಹಿನ್ನಲೆಯಲ್ಲಿ ಕೇಳಿಬರುವ ಅಂಬೇಡ್ಕರ್ ಅವರ ವಾಣಿಯ ಮುಖಾಂತರ ನಾಟಕ ಯಾವುದೇ ರೀತಿಯ ಅಖೈರಾದ ತೀರ್ಮಾನ ತೆಗೆದುಕೊಳ್ಳದೆ ಮುಕ್ತಾಯವಾಗುವ ಮೂಲಕ ನಾಟಕಕ್ಕೆ ತಾರ್ಕಿಕ ಅಂತ್ಯ ನೀಡಲಾಯಿತು.
ಸಾಹಿತಿ ವಡ್ಡಗೆರೆ ನಾಗರಾಜಯ್ಯ ಅಶಯ ನುಡಿಗಳ ಮುಖಾಂತರ ನಾಟಕಕ್ಕೆ ಚಾಲನೆ ನೀಡಲಾಯಿತು. ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ, ತಾಲ್ಲೂಕು ದಲಿತ ಸಹಾಯವಾಣಿಯ ಹನುಮಂತಯ್ಯ,, ಹಸಿರು ಸೇನೆಯ ಕೆಂಕೆರೆಸತೀಶ್ , ಪಿಎಸೈ ಘೋರ್ಪಡೆ, ಕರವೇ ಅಧ್ಯಕ್ಷ ಕೋಳಿಶ್ರೀನಿವಾಸ್, ಜಯಕರ್ನಾಟಕ ಸಂಘದ ತಾಲ್ಲೂಕ್ ಅಧ್ಯಕ್ಷ ವೆಂಕಟೇಶ್,ಟಿಪ್ಪು ಅಂಘದ ಅಪ್ಸರ್,ಕಿರುತೆರೆ ಕಲಾವಿದ ಗೌಡಿ,ಶಿಕ್ಷಕಿ ಲಕ್ಷ್ಮಿಬಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಾಟಕದ ಹೆಸರು ಏನು? ಸರ್
ಪ್ರತ್ಯುತ್ತರಅಳಿಸಿ