ಹುಳಿಯಾರು ಇಲ್ಲಿನ ರೋಟರಿ ಕ್ಲಬ್ ಹಾಗೂ ತುಮಕೂರಿನ ಬೆಳ್ಳಿ ಬ್ಲಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಪಟ್ಟಣದ ರೋಟರಿ ಬಾಲಭವನದಲ್ಲಿ ಇಂದು (ತಾ.21) ಸೋಮವಾರ ಮಧ್ಯಾಹ್ನ ನಡೆಯಲಿದೆ.
ಶಿಬಿರದಲ್ಲಿ ರಕ್ತದ ಮಹತ್ವ ,ರಕ್ತದಾನದ ಬಗ್ಗೆ ಹಾಗೂ ಯಾವ ವಯಸ್ಸಿನವರು ರಕ್ತದಾನ ಮಾಡಬಹುದು,ಅದರಿಂದ ಆಗುವ ಪ್ರಯೋಜನ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡುವುದಲ್ಲದೆ, ಉಚಿತವಾಗಿ ಬ್ಲೆಡ್ ಗ್ರೂಪ್ ಪರೀಕ್ಷೆ ಮಾಡಿಕೊಡಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ರೋಟರಿ ಅಧ್ಯಕ್ಷ ರವೀಶ್(9448533976), ಕಾರ್ಯದರ್ಶಿ ಗಂಗಾಧರರಾವ್ (845340713) . ಬೆಳ್ಳಿಲೋಕೇಶ್ ಅವರನ್ನು ಸಂಪರ್ಕಿಸಬಹುದಾಗಿದೆ.
(ತಾ.21) ಹುಳಿಯಾರು ರೋಟರಿ ಪದಗ್ರಹಣ ಸಮಾರಂಭ
--------
ಹುಳಿಯಾರು: ಹೋಬಳಿ ರೋಟರಿ ಕ್ಲಬ್ ನ 2014-15ನೇ ಸಾಲಿನ ಕಾರ್ಯಕಾರಿ ಮಂಡಳಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು (ತಾ.21) ಸೋಮವಾರ ಬೆಳಗ್ಗೆ ರೋಟರಿ ಬಾಲಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ತುಮಕೂರು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಕೆ.ಪಿ.ನಾಗೇಶ್ ಹಾಗೂ ಸುರೇಶ್ ಪೈ ಅವರ ಉಪಸ್ಥಿತಿಯಲ್ಲಿ ನೂತನ ಅಧ್ಯಕ್ಷರಾಗಿ ಈ. ರವೀಶ್ ಹಾಗೂ ಇನ್ನಿತರರು ಪದಗ್ರಹಣ ಮಾಡಲಿದ್ದಾರೆ. ರೋಟರಿ ಕ್ಲಬ್ ನ ಗಂಗಾಧರರಾವ್, ಹನುಮಂತಪ್ಪ,ಗಂಗಾಧರ್, ಅಥೀಕ್, ಕೆ.ಎಸ್.ರಮೇಶ್ ಸೇರಿದಂತೆ ಕ್ಲಬ್ ನ ಸದಸ್ಯರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ರೋಟರಿ ಸಂಸ್ಥೆ ಸೇರಬಲ್ಲ ಆಸಕ್ತರು ಸ್ವಯಂಪ್ರೇರಣೆಯಿಂದ ನೋಂದಾಯಿತರಾಗಬಹುದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಗಂಗಾಧರಾವ್ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ