ವಿಷಯಕ್ಕೆ ಹೋಗಿ

ಹುಳಿಯಾರು : ಸಂಭ್ರಮದ ರಂಜಾನ್ ಆಚರಣೆ

         ಹುಳಿಯಾರು  ಪಟ್ಟಣ ಸೇರಿದಂತೆ ಬಳ್ಳೆಕಟ್ಟೆ,ಕಂಪನಹಳ್ಳಿ,ಯಾಕೂಬ್ ಸಾಬ್ ಪಾಳ್ಯ ಮುಂತಾದೆಡೆ ಮುಸ್ಲಿ ಬಾಂಧವರು ರಂಜಾನ್ ಹಬ್ಬವನ್ನು ಮಂಗಳವಾರದಂದು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಶುಭಾಷಯವಿನಿಮಯ ಮಾಡಿಕೊಳ್ಳುತ್ತಿರುವುದು.
        ಪಟ್ಟಣದಲ್ಲಿ ಕುತಬ್-ಎ-ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಸಾವಿರಕ್ಕೂ ಅಧಿಕ ಮಂದಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
        ಮುಂಜಾನೆಯೇ ಜಾಮಿಯಾ, ನೂರಾನಿ, ಮದೀನಾ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿ ನಂತರ ಬೆಳಿಗ್ಗೆ ಹತ್ತರ ವೇಳೆಗೆ ಈದ್ಗಾಮೈದಾನದಲ್ಲಿಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳಾದ ಮೌಲಾನ ಹಜರತ್ ಆಸೀಫ್ ಅವರ ಧಾರ್ಮಿಕ ಭೋದನೆಯಲ್ಲಿ ಹಬ್ಬದ ಸಂದೇಶ ನೀಡಿ ರಂಜಾನ್ ಹಬ್ಬದ ಆಚರಣೆ ಹಾಗೂ ದಾನ ಧರ್ಮದ ಮಹತ್ವ ಕುರಿತು ತಿಳಿಸಿದರು.ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಮುತುವಲ್ಲಿ ಜಬೀಉಲ್ಲಾ, ನೂರಾನಿ ಮಸೀದಿಯ ಮುತುವಲ್ಲಿ ಬೈಜು ಸಾಬ್, ಮುಸ್ಲಿಂ ಸಮುದಾಯದ ಮುಖಂಡರುಗಳು ಸೇರಿದಂತೆ ಅಪಾರ ಸಂಖ್ಯೆಯ ಮುಸ್ಲಿಂಬಾಂಧವರು ಉಪಸ್ಥಿತರಿದ್ದರು.

          ಪ್ರಮುಖ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಾಗಿದ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಂಧುಗಳು ಒಬ್ಬರಿಗೊಬ್ಬರು ಅಪ್ಪಿಕೊಳ್ಳುವ ಮೂಲಕ ಹಬ್ಬದ ಶುಭಾಷಯ ವಿನಿಮಯಮಾಡಿಕೊಂಡರು.ಮಕ್ಕಳು, ಮಹಿಳೆಯರು ಮೆಹಂದಿ ಹಾಕಿ, ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರಲ್ಲದೆ ವಿಶೇಷ ಹಬ್ಬದೂಟ ಸವಿಯುವ ಮೂಲಕ ಕಳೆದ ಇಪ್ಪತ್ತೆಂಟು ದಿನಗಳ ಉಪವಾಸ ವ್ರತ ಕೊನೆಗೊಳಿಸಿದರು.
ರಂಜಾನ್ ಆಚರಣೆಯ ಚಿತ್ರಾವಳಿಗಳು










ಕಾಮೆಂಟ್‌ಗಳು