ಹೋಬಳಿ ವ್ಯಾಪ್ತಿಯ ಪಹಣಿ ತಿದ್ದುಪಡಿ ಆಂದೋಲನವನ್ನು ಶೀಘ್ರವೇ ಹಮ್ಮಿಕೊಳ್ಳುವಂತೆ ಹಾಗೂ ಪಟ್ಟಣದ ನಾಢಕಚೇರಿಯಲ್ಲಿ ಪಹಣಿ ಇನ್ನಿತರ ದಾಖಲೆ ಪಡೆಯಲು ಬರುವ ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿ ತಾಲ್ಲೂಕು ಮಹಾಜನ್ ಪರಿವಾರ್ ವತಿಯಿಂದನಾಢಕಚೇರಿ ಅಧಿಕಾರಿಗಳಿಗೆ ಮನವಿ ಗುರುವಾರ ಸಲ್ಲಿಸಲಾಯಿತು.
ಹುಳಿಯಾರಿನ ಉಪತಹಶೀಲ್ದಾರ್ ಹನುಮಂತನಾಯಕ ಅವರಿಗೆ ತಾಲ್ಲೂಕು ಮಹಾಜನ್ ಪರಿವಾರ್ ವತಿಯಿಂದ ಮನವಿ ಸಲ್ಲಿಸಲಾಯಿತು. |
ಹುಳಿಯಾರು ಜಿಲ್ಲೆಯಲ್ಲಿಯೇ ದೊಡ್ಡ ಹೋಬಳಿ ಕೇಂದ್ರವಾಗಿದ್ದು ಇಲ್ಲಿನ ನಾಡಕಛೇರಿಗೆ ನಿತ್ಯ ಪಹಣಿಯಲ್ಲಿನ ಲೋಪದೋಷಗಳ ಸಮಸ್ಯೆ ಬಗ್ಗೆ ಸಾರ್ವಜನಿಕರು ಎಡತಾಕುತ್ತಲೇ ಇರುತ್ತಾರೆ. ಈ ಸಂಬಂಧ ಬಹುದಿನದಿಂದ ಪಹಣಿ ತಿದ್ದುಪಡಿ ಆಂದೋಲನ ನಡೆದಿಲ್ಲದಿದ್ದು ಸಮಸ್ಯೆ ಉಂಟಾಗಿದೆ. ಅಲ್ಲದೆ ನಾಢಕಚೇರಿಯಲ್ಲಿ ಒಂದೇ ಒಂದು ಪಹಣಿ ವಿತರಣಾ ಕೇಂದ್ರವಿದ್ದು ನಿತ್ಯ ಇಲ್ಲಿ ನೂರಾರು ಜನ ಸರದಿ ಸಾಲಿನಲ್ಲಿ ಪಹಣಿ ಪಡೆಯಲು ನಿಲ್ಲುವಂತಾಗಿದ್ದು ನೆರಳಿನ ವ್ಯವಸ್ಥೆ ಇಲ್ಲದಿರುವುದರಿಂದ ಬಿಸಿಲಲ್ಲೆ ನಿಲ್ಲಬೇಕಾಗಿದೆ . ಸಮಸ್ಯೆ ಬಗೆ ಮೇಲಾಧಿಕಾರಿಗಳು ಕೂಡಲೇ ಹರಿಸುವಂತೆ ಮಹಾಜನ್ ಪರಿವಾರ್ ನ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಮದಕರಿ ಹಾಗೂ ಸದಸ್ಯರುಗಳು ಉಪತಹಶೀಲ್ದಾರ್ ಹನುಮಂತನಾಯಕ ಅವರಿಗೆ ಮನವಿ ಸಲ್ಲಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ