ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಸೇವಾ ಮನೋಭಾವನೆಯನ್ನು ತನ್ನ ಮೂಲಮಂತ್ರವಾಗಿಸಿಕೊಂಡು ಸ್ಥಾಪನೆಯಾದ ರೋಟರಿ ಸಂಸ್ಥೆ ಇಂದಿಗೂ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೇವೆಗೆ ಖ್ಯಾತಿಯಾಗಿದೆ ಎಂದು ತುಮಕೂರು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಕೆ.ಪಿ.ನಾಗೇಶ್ ಸಂತಸ ವ್ಯಕ್ತಪಡಿಸಿದರು.
ಹುಳಿಯಾರು ಹೋಬಳಿ ರೋಟರಿ ಕ್ಲಬ್ ನ 2014-15ನೇ ಸಾಲಿನ ಕಾರ್ಯಕಾರಿ ಮಂಡಳಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿದ ಅವರು ಮಾತನಾಡಿದರು.
ಹುಳಿಯಾರು ರೋಟರಿ ಕ್ಲಬ್ ನ ಕಾರ್ಯಕಾರಿ ಮಂಡಳಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜಿಲ್ಲಾ ಗವರ್ನರ್ ಕೆ.ಪಿ.ನಾಗೇಶ್ ಉದ್ಘಾಟಿಸಿದರು. |
ರೋಟರಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ,ಬಡವರಿಗೆ,ರೋಗಿಗಳಿಗೆ,ಅಂಕವಿಕಲರು ಸೇರಿದಂತೆ ಸಮಾಜದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಅನೇಕ ಜನರಿಗೆ ಸಹಕಾರ ನೀಡುತ್ತ ಸಾಗುತ್ತಿದೆ ಎಂದರುಪಲ್ಸ್ ಪೋಲೀಯೋ .ರೋಟರಿಯ ಮಹತ್ವಪೂರ್ಣ ಸಾಧನೆಯಾಗಿದ್ದು, ಇಂದು ಭಾರತ ಪಲ್ಸ್ ಪೋಲಿಯೋ ಮುಕ್ತ ದೇಶವಾಗಲು ರೋಟರಿಶ್ರಮವೂ ಸಹ ಇದೆ ಎಂದರು. ಹುಳಿಯಾರು ರೋಟರಿ ಸಂಸ್ಥೆಯು ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಹೆಚ್ಚು ಸದಸ್ಯರು ಸ್ವಯಂಪ್ರೇರಿತರಾಗಿ ಸೇರಿಕೊಂಡು ಸಮಾಜಸೇವೆಯಲ್ಲಿ ತೊಡಗುವಂತೆ ಕರೆ ನೀಡಿದರು.
ರೋಟರಿಯ ನೂತನ ಅಧ್ಯಕ್ಷರನ್ನಾಗಿ ಈ.ರವೀಶ್ ಹಾಗೂ ಕಾರ್ಯದರ್ಶಿಯಾಗಿ ಗಂಗಾಧರ್ ಆಯ್ಕೆಯಾಗಿ ಮಾಡಲಾಯಿತು.ರೋಟರಿ ನಿಕಟಪೂರ್ವ ಅಧ್ಯಕ್ಷ ಗಂಗಾಧರರಾವ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾರೋಟರಿಯ ಬಿಳಿಗಿರೆ ಶಿವಕುಮಾರ್,ಚಿ.ನಾಹಳ್ಳಿ ರೋಟರಿಯ ಸಿ.ಎಸ್.ಪ್ರದೀಪ್,ಅಶ್ವತ್ ನಾರಾಯಣ,ಅರ್ಶತ್ ಪಾಷ,ತಿಪಟೂರು ಕ್ಲಬ್ ನ ಸಂತೋಷ ಓಸ್ವಾಲ್,ತುಮಕೂರು ರೋಟರಿ ಸೆಂಟ್ರಲ್ ನ ಅಧ್ಯಕ್ಷ ಧನಂಜಯ,ಟಿ.ಬಿ.ಮೃತ್ಯುಂಜಯ, ತಿಪ್ಪೇಸ್ವಾಮಿ,ರೋಟರಿ ಈಸ್ಟ್ ನ ಅಧ್ಯಕ್ಷ ರಾಜೇಂದ್ರ ಹಿರೇಮಠ್,ಟಿ.ಎಸ್.ಸಾಗರ್ ಹುಳಿಯಾರು ರೋಟರಿ ಕ್ಲಬ್ ನ ಮಂಜುನಾಥ್ ಗುಪ್ತ, ಟಿ.ಆರ್.ಲಕ್ಷ್ಮಿಕಾಂತ್, ದುರ್ಗರಾಜ್, ಶ್ರೀನಿವಾಸ್,ಚನ್ನಬವಯ್ಯ,ಸುದರ್ಶನ್ ಕೆ.ಎಸ್.ರಮೇಶ್, ಅಥೀಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ