ಹುಳಿಯಾರು ಹೋಬಳಿ ಕಂಪನಹಳ್ಳಿಯಲ್ಲಿ ಜಮೀನೊಂದರ ಅಳತೆ ಮಾಡಲು ಹೋದ ಸರ್ವೇಯರ್ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೆ ಹಾಗೂ ಜಮೀನಿನ ಮಾಲೀಕ ಹಾಗೂ ಬಿಡಿಸಲು ಹೋದ ರೈತಸಂಘದವರ ಮೇಲೆ ಮಲ್ಲಿಕ್ ಸಾಬ್ ಕುಟುಂಬದವರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಮೀನಿನ ಮಾಲೀಕರ ಮೇಲೆ ದೌರ್ಜನ್ಯ ಎಸಗಿರುವವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ರೈತಸಂಘದವರು ಪಿಎಸೈ ಅವರನ್ನು ಒತ್ತಾಯಿಸಿದರು. |
ಕಂಪನಹಳ್ಳಿಯಲ್ಲಿ ಪದ್ಮನಾಭ ಮತ್ತು ಮಲ್ಲಿಕ್ ಸಾಬ್ ಅವರ ನಡುವೆ ಜಮೀನಿಗೆ ಸಂಬಂಧಿಸಿದಂತೆ ವಿವಾದವಿದ್ದು,ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ಅಳತೆ ಮಾಡಲು ಸರ್ವೆಯರ್ ಆಗಮಿಸಿದಾಗ ವಾದವಿವಾದ ನಡೆದು ಕಡೇಕರ್ ಕಡೆಯವರ ಮೇಲೆ ಹಲ್ಲೆ ಮಾಡಲಾಗಿದೆ.ಕಂಪನಹಳ್ಳಿಯಲ್ಲಿ ಶವಸಂಸ್ಕಾರಕ್ಕೆ ತೆರಳಿದ ರೈತ ಸಂಘದವರು ಗಲಾಟೆ ಗಮನಿಸಿ ಸ್ಥಳಕ್ಕೆ ಧಾವಿಸಿದಾಗ ಅವರ ಮೇಲೂ ಮಚ್ಚು,ದೊಣ್ಣೆಯಿಂದ ಹಲ್ಲೆಗೆ ಮುಂದಾಗಿದ್ದಾರೆ. ತಮ್ಮಡಿಹಳ್ಳಿ ಮಲ್ಲಿಕಣ್ಣ ಅವರ ಹಲ್ಲು ಮುರಿಯುವಂತೆ ಅವರ ಮೇಲೆ ಹಲ್ಲೆ ಮಾಡಿದ್ದು ಹಾಗೂ ಪೊಲೀಸರ ಆಗಮನದಿಂದ ಹೆಚ್ಚಿನ ಅನಾಹುತ ತಪ್ಪಿದೆ. ಈ ಬಗ್ಗೆ ಠಾಣೆಯಲ್ಲಿ ದೂರು ನೀಡಿರುವ ಪದಾಧಿಕಾರಿಗಳು ಮೇಲ್ಕಂಡ ಎಲ್ಲಾ ಘಟನೆಗೆ ಸ್ಥಳದಲ್ಲೇ ಇದ್ದ ತಹಶೀಲ್ದಾರ್ ಅವರು ಸಾಕ್ಷಿಯಾಗಿದ್ದು, ಅವರ ಮುಂದೆಯೇ ನಮ್ಮ ಮೇಲೆ ದೌರ್ಜನ್ಯವೆಸಗಿರುವ ಮಲ್ಲಿಕ್ ಸಾಬ್ ಕುಟುಂಬದವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಪಾದಿತರು ಅಲ್ಪಸಂಖ್ಯಾತರೆಂಬ ನೆಪವೊಡ್ಡಿ ಅವರುಗಳ ಮೇಲೆ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿಲ್ಲ ಎಂದು ರೈತಸಂಘದ ಸತೀಶ್ ಆರೋಪಿಸಿದ್ದು, ಸೂಕ್ತ ಕ್ರಮಗೊಳ್ಳದಿದ್ದಲ್ಲಿ ರೈತಸಂಘದವತಿಯಿಂದ ಠಾಣೆಯ ಮುಂದೆ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.ಪ್ರಕರಣ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ