ನರಗುಂದ - ನವಲಗುಂದ, 34ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಹಾಗೂ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಆಗುವ ಸಾದಕ ಬಾದಕಗಳ ಬಗ್ಗೆ ಜಾಗೃತಿ ಮೂಡಿಸಲು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆವತಿಯಿಂದ ಸಾರ್ವಜನಿಕರೊಂದಿಗೆ ಸಮಾಲೋಚನ ಸಭೆಯನ್ನು (ತಾ.21) ಸೋಮವಾರದಂದು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಕರೆದಿದ್ದು ಹುಳಿಯಾರು ಹಾಗೂ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳ ಸುಮಾರು ನೂರಕ್ಕೂ ಹೆಚ್ಚು ರೈತ ಬಾಂಧವರು ಭಾಗವಹಿಸುತ್ತಿರುವುದಾಗಿ ಹಸಿರು ಸೇನೆಯ ರಾಜ್ಯ ಸಂಚಾಲಕ ಕೆಂಕೆರೆ ಸತೀಶ್ ತಿಳಿಸಿದರು.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿ ಮಾತನಾಡಿದ ಅವರು ರಾಜ್ಯಾದ್ಯಂತ ಭೀಕರ ಬರಗಾಲವಿದ್ದು ಅದನ್ನು ಸಮರ್ಥವಾಗಿ ನಿಭಾಯಿಸಲಾಗದ , ರೈತರ ಸಾಲ ಮನ್ನಾ ಮಾಡದ,ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ ಹಣ ನೀಡದ, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ವೈಜ್ಞಾನಿಕ ಬೆಲೆ ನೀಡುವಲ್ಲಿ ಹಾಗೂ ಸೂಕ್ತ ನೀರಾವರಿ ಯೋಜನೆಗಳನ್ನು ಜಾರಿ ಮಾಡದಿರುವ ಸರ್ಕಾರದ ವಿರುದ್ದ ಹೋರಾಟಕ್ಕೆ ರಾಜ್ಯ ರೈತ ಸಂಘ ಮುಂದಾಗಿದ್ದು ಹೋರಾಟದ ರೂಪುರೇಷಗಳನ್ನು ಈ ಸಭೆಯಲ್ಲಿ ನಿರ್ಣಯಿಸಲಾಗುವುದು ಎಂದರು.
ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆಯಿಲ್ಲದೆ, ಬರಗಾಲದಿಂದಾಗಿ ಕೃಷಿ ಚಟುವಟಿಕೆಯಲ್ಲ ಸ್ಥಗಿತವಾಗಿದ್ದು ಅನೇಕ ಸಮಸ್ಯೆಗೆಳ ಸರಮಾಲೆಯನ್ನು ಹೊತ್ತಿರುವ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಇಷ್ಟಾದರೂ ಸಹ ಈ ಬಗ್ಗೆ ಸರ್ಕಾರ ಕಿವಿಗೊಡದ ಮೌನವಹಿದ್ದು, ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದ ಅವರು ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆ,ಸಿಹಿ ನೀರಾ ಮಾರಾಟ ಜಾರಿ ಮಾಡುವುದು, ಯಗಚಿ ಶಾಶ್ವತ ನೀರಾವರಿ ಯೋಜನೆ ಜಾರಿ, ಅತೀವೃಷ್ಠಿ,ಬರಗಾಲ ಸಮಯದಲ್ಲಿ ಸಾಲಮನ್ನಾ,ಹಂಗಾಮಿ ಸಾಗುವಳಿದಾರರನ್ನು ಸಕ್ರಮಗೊಳಿಸುವುದು,ಡಾ.ಪರಮಶಿವಯ್ಯ ಅವರ ನೀರಾವರಿ ಯೋಜನೆಯ ಜಾರಿ,ಮುಂತಾದ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕೋಡಿಹಳ್ಳಿ ಚಂದ್ರಶೇಖರ್,ಬಸವರಾಜಪ್ಪ, ಕಡಿದಾಲ್ ಶಾಮಣ್ಣ ಮುಂತಾದವರ ನೇತೃದಲ್ಲಿ ಹೋರಾಟ ಕೈಗೊಳ್ಳುವುದಾಗಿ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ