ಹುಳಿಯಾರು: ಜೀವನವೆಂಬುದು ಮಾನವರಿಗೆ ಸಿಕ್ಕಿರುವ ಒಂದು ವರವಾಗಿದ್ದು, ನಾವುಗಳು ಸರಿಯಾಗಿ ನಡೆಯದೇ ನಮ್ಮ ಶಾಂತಿ,ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದೇವೆ. ನಾವೆಲ್ಲಾ ಪರಸ್ಪರ ಸಹಕಾರ,ಸಹಬಾಳ್ವೆಯಿಂದ ಬದುಕಿದಾಗ ಮಾತ್ರ ಜೀವನ ಶಾಂತಿ,ನೆಮ್ಮದಿ, ಸಂತಸದಿಂದ ಕೂಡಿರುತ್ತದೆಂದು ಬೆಂಗಳೂರಿನ ವಿಕಾಸ್ ಸೆಂಟರ್ ಫಾರ್ ಲರ್ನಿಂಗ್ ನ ಮುಖ್ಯಸ್ಥ ಬಿ.ಎಸ್.ರವಿಪ್ರಕಾಶ್ ತಿಳಿಸಿದರು.
ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯವತಿಯಿಂದ ಅಯೋಜಿಸಿದ್ದ "ನೆಮ್ಮದಿಯ ಬದುಕಿಗೆ ಕರ್ಮಸಿದ್ದಾಂತದ ಅನ್ವಯ" ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯಲ್ಲಿ "ನೆಮ್ಮದಿಯ ಬದುಕಿಗೆ ಕರ್ಮಸಿದ್ದಾಂತದ ಅನ್ವಯ" ಕುರಿತ ಉಪನ್ಯಾಸವನ್ನು ಬಿ.ಎಸ್.ರವಿಪ್ರಕಾಶ್ ನೀಡಿದರು. |
ಭೂಮಿಯ ಮೇಲಿನ ಜೀವರಾಶಿಗಳಲ್ಲಿ ಮಾನವ ಮಾತ್ರ ವಿಶಿಷ್ಟವಾಗಿದ್ದು , ತನ್ನದೇ ಆದ ಆಲೋಚನೆಗಳಲ್ಲಿ ತೊಡಗಿಕೊಂಡಿರುವುಲ್ಲದೆ ತನ್ನಿಷ್ಟದಂತೆ ಬದುಕನ್ನು ರೂಪಿಸಿಕೊಳ್ಳುವಲ್ಲಿ ಸಾಗುತ್ತಾ ಅನೇಕ ಕರ್ಮಕಾರ್ಯಗಳನ್ನು ಮಾಡುತ್ತಾನೆ ಎಂದರು. ಬದುಕಿನಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ಕರ್ಮವನ್ನು ಮಾಡಿರುತ್ತಾದರೂ ಅದರ ಬಗ್ಗೆ ಅರಿವಿದ್ದೂ ಸಹ ಪರಿಜ್ಞಾನವಿಲ್ಲದವರಂತೆ ನಡೆಯುವುದರಿಂದ ನಮ್ಮ ಜೀವನದಲ್ಲಿನ ಕರ್ಮಫಲಗಳು ಹೆಚ್ಚುತ್ತವೆ. ಆದ್ದರಿಂದ ನಾವು ಮಾಡುವ ಕರ್ಮಕಾರ್ಯಗಳನ್ನು ಸಕಾರಾತ್ಮಕವಾಗಿ ಇರುವಂತೆ ಅರಿತು ನಡೆಯಬೇಕು ಎಂದರು.
ಜೀವನದಲ್ಲಿ ನೆಮ್ಮದಿ ಲಭಿಸಬೇಕಾದರೆ ಕರ್ಮಸಿದ್ದಾಂತವನ್ನು ಅನ್ವಯಿಸಿಕೊಂಡು ನಡೆಯಬಹುದಾಗಿದ್ದು, ಯಾರೊಬ್ಬರನ್ನು ನೇರವಾಗಿ ಟೀಕಿಸುವುದಾಗಲಿ, ಅವರು ಮಾಡಿದ ಕಾರ್ಯಗಳಲ್ಲಿ ಸದಾಕಾಲ ತಪ್ಪನ್ನು ಹುಡುಕುವುದಾಗಲಿ ಮಾಡುವುದರಿಂದ ದ್ವೇಷ,ಅಸೂಯೆ,ಆಶಾಂತಿಯ ವಾತಾವರಣ ನಿರ್ಮಾಣವಾಗಿ ಜೀವನ ಬೇಸರ ಎಂಬಂತಾಗುತ್ತದೆ. ಎಲ್ಲರೂ ಒಬ್ಬರಿಗೊಬ್ಬರು ಪ್ರೀತಿ,ವಿಶ್ವಾಸವನ್ನು ನೀಡುತ್ತಾ ಅವರವರು ಮಾಡುವ ತಪ್ಪುಗಳನ್ನು ಅವರೇ ಅರಿತಾಗ ಜೀವನದಲ್ಲಿ ಸಾರ್ಥಕತೆ ಲಭಿಸುತ್ತದೆ ಎಂದರು.
ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯ ಅಧ್ಯಕ್ಷ ಹೆಚ್.ಬಿ.ಗೋಪಾಲಕೃಷ್ಣ ಅಧ್ಯಕ್ಷತೆವಹಿಸಲಿದ್ದು,ಹೆಚ್.ಸಿ.ಜಗದೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸೊಸೈಟಿಯ ಎಂ.ಆರ್.ಗೋಪಾಲ್,ವಕೀಲ ಸತೀಶ್, ಸುದರ್ಶನ್ ಸೇರಿದಂತೆ ಇತರ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ