ಸಂಸ್ಕಾರವಂತ ಮನುಷ್ಯ ತನ್ನ ಜೀವನದಲ್ಲಿ ಏನೆಲ್ಲಾ ಅನುಭವಿಸಲು ಮುಂದಾಗುತ್ತಾನೆ ,ಆದರೆ ಮನಸ್ಸು ಪರಿಶುದ್ದವಿಲ್ಲದೆ ಯಾವುದನ್ನು ಅನುಭವಿಸುದರೂ ಅದರಿಂದ ಯಾವುದೇ ರೀತಿಯ ತೃಪ್ತಿ ಸಿಗುವುದಿಲ್ಲವಾದ್ದರಿಂದ ಮಾನವ ತನ್ನ ಜೀವನದಲ್ಲಿ ಸದ್ಗುಣಗಳನ್ನು ಹೊಂದಿ ಪರಿಶುದ್ಧ ಮನಸ್ಸಿನಿಂದ ಸಾಗಬೇಕು ಎಂದು ಡಾ|| ಗೋಪಾಲಕೃಷ್ಣ ತಿಳಿಸಿದರು.
ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯಲ್ಲಿ ಡಾ|| ಗೋಪಾಲಕೃಷ್ಣ ನಿತ್ಯ ಜೀವನದ ಪರಿಶುದ್ಧತೆಗೆ ಸಪ್ತ ಸೂತ್ರಗಳ ಕುರಿತ ವಿಶೇಷ ಉಪನ್ಯಾಸ ನೀಡಿದರು |
ದಿವಂಗತ ಹೆಚ್.ಎ.ಭಾಸ್ಕರಾಚಾರ್ ಅವರ ಸ್ಮರಣಾರ್ಥ ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ನಿತ್ಯ ಜೀವನದ ಪರಿಶುದ್ಧತೆಗೆ ಸಪ್ತ ಸೂತ್ರಗಳ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನ ಮನಸ್ಸು ಸಹ ದೇಹದ ಒಂದು ರೀತಿಯ ಅಂಗವಾಗಿದ್ದು , ಮನಸ್ಸಿನ ಮಾತಿನಿಂತೆ ನಡೆಯುವುದು ಸಹಜ. ಇದರಿಂದ ಒಳ್ಳೆಯದ್ದು, ಕೆಟ್ಟದು ಎಲ್ಲವೂ ನಡೆಯುತ್ತದೆ. ಲಕ್ಷಾಂತರ ಜೀವರಾಶಿಗಳಲ್ಲಿ ಮನುಷ್ಯ ಮಾತ್ರ ಶಾಸ್ತ್ರ, ಧರ್ಮ ಜಪ, ತಪ ಸೇರಿದಂತೆ ಒಳ್ಳೆಯದು ಕೆಟ್ಟದು ಎಂದು ತಿಳಿಯುವ, ಯೋಚಿಸುವ ಬುದ್ಧಿಶಕ್ತಿಯನ್ನು ಹೊಂದಿದ್ದಾನೆ ಎಂದರು. ಮನಸ್ಸಿನಲ್ಲಿ ಪರಿಶುದ್ಧತೆಯಿಲ್ಲದೆ ಯಾವುದೇ ಕಾರ್ಯಗಳನ್ನು ಮಾಡಿದರೆ ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದರು.
ಜೀವನದಲ್ಲಿ ಶಾಂತಿ,ನೆಮ್ಮದಿ ಲಭಿಸಬೇಕಾದರೆ ಮಾನವ ಜೀವನದ ನಿರ್ವಹಣೆಯ ಸಪ್ತ ಸೂತ್ರಗಳನ್ನು ಅರಿತು ನಡೆಯಬೇಕು ಹಾಗೂ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಶಾಂತರೀತಿಯಲ್ಲಿ ಪರಿಹಾರ ಕಂಡುಕೊಂಡಾಗ ಮಾತ್ರ ಜೀವನ ಸುಖಕರವಾಗಿರುತ್ತದೆ ಎಂದರು. ನಿತ್ಯ ರಾತ್ರಿ ಮಲಗುವ ಮುನ್ನಾ ನಮ್ಮ ಮನಸ್ಸನ್ನು ನಾವೇ ಪ್ರಶ್ನಿಸಿಕೊಳ್ಳುತ್ತಾ ಈ ದಿನ ನಾನು ಯಾವಯಾವ ಕಾರ್ಯಗಳನ್ನು ಮಾಡಿದೆ ಎಂದು ಪರಾಮರ್ಶಿಸಿಕೊಳ್ಳಬೇಕು ಇದರಿಂದ ಮನಸ್ಸಿನ ಅನೇಕ ದುಗುಡಗಳಿಗೆ ಪರಿಹಾರ ಲಭಿಸುತ್ತದೆ. ಜೀವನದಲ್ಲಿ ಒಂದು ನಿರ್ದಿಷ್ಟ ಯೋಜನೆ ಇರಬೇಕು ಇಲ್ಲವಾದರೆ ಜೀವನವೆಂಬುದು ಸೂತ್ರ ಹರಿದ ಗಾಳಿಪಟದಂತಾಗುತ್ತದೆ. ಬಾಹ್ಯ ಶುಚ್ಚಿತ್ವಕ್ಕಿಂತ ಆಂತರಿಕ ಶುಚ್ಚಿತ್ವ ಪ್ರಮುಖವಾಗಿದ್ದು, ಉತ್ತಮ ಆಲೋಚನೆಗಳಲ್ಲಿ ತೋಡಗುವ ಮೂಲಕ
ಜೀವನದಲ್ಲಿ ಯಶಸ್ಸುಗಳಿಸಬಹುದು ಎಂದು
ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯ ಅಧ್ಯಕ್ಷ ಹೆಚ್.ಬಿ.ಗೋಪಾಲಕೃಷ್ಣ ಮಾತನಾಡಿ ಜೀವನದಲ್ಲಿ ಸದಾಕಾಲ ಸುಖ ಸಂತೋಷ ತುಂಬಿರಬೇಕೆಂದರೆ ಮನಸ್ಸು ಪರಿಶುದ್ಧತೆಯಿಂದ ಕೂಡಿರಬೇಕು ಅದಕ್ಕಾಗಿ ಸಪ್ತ ಸೂತ್ರಗಳ ಅವಶ್ಯಕತೆಯಿದ್ದು ಅದನ್ನು ಪಾಲಿಸುತ್ತಾ ನಮ್ಮೆಲ್ಲರ ಜೀವನ ಸಮೃದ್ದವಾಗಿರಲಿ ಎಂದು ಆಶಿಸಿದರು.
ಎಂ.ಆರ್.ಗೋಪಾಲ್ ಪ್ರಾಸ್ತಾವಿಕ ನುಡಿಗಳನ್ನಾಡಿ
ದರು, ವೆಂಕಟಾದ್ರಿ ಭಜನಾಮಂಡಳಿಯ ಮಹಿಳೆಯರು ಸಂಕೀರ್ತನಾ ಕಾರ್ಯಕ್ರಮ ನಡೆಸಿಕೊಟ್ಟರು.ಮಹೇಶಾಚಾರ್ ಸ್ವಾಗತಿಸಿ, ಶಿಕ್ಷಕ ಜಗದೀಶ್ ನಿರೂಪಿಸಿ ,ಕಾರ್ಯದರ್ಶಿ ಸತೀಶ್ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ