ಶಾಲಾ-ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ತಂತಮ್ಮ ಶಾಲೆಗಳಲ್ಲಿ ಹಿರಿಯ ವಿದ್ಯಾರ್ಥಿ ಸಂಘಗಳನ್ನು ರಚಿಸಿಕೊಂಡು ಅದಕ್ಕೆ ಇತರನ್ನು ಸೇರಿಸಿಕೊಳ್ಳುವ ಮೂಲಕ ತಾವು ಓದಿದ ಶಾಲೆಗೆ ಏನಾದರೂ ಒಂದು ಸೇವೆ ಮಾಡಲು ಮುಂದಾಗಬೇಕೆಂದು ಹಂದನಕೆರೆ ಪಿಎಸೈ ಸುನಿಲ್ ತಿಳಿಸಿದರು
ಹುಳಿಯಾರು ಸಮೀಪದ ಹಂದನಕೆರೆ ಜಿ.ವಿ.ಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ಹಿರಿಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹುಳಿಯಾರು ಸಮೀಪದ ಹಂದನಕೆರೆ ಜಿ.ವಿ.ಪಿ. ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಪಿಎಸೈ ಸುನಿಲ್ ನೆರವೇರಿಸಿದರು. |
ಓದು ಮುಗಿದ ನಂತರ ಪ್ರತಿಯೊಬ್ಬರು ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡು ಹಣ ಸಂಪಾದನೆ ಮುಂದಾಗುತ್ತಾರೆ. ನಂತರ ತಾವು ಓದಿದ ಶಾಲೆಗೆ ಏನಾದರೂ ಕೊಡುಗೆ ನೀಡುವ ಮನೋಭಾವವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮೈಗೊಡಿಸಿಕೊಳ್ಳಬೇಕು ಹಾಗೂ ಪ್ರತಿಯೊಂದು ಶಾಲೆಗಳಲ್ಲಿ ಈ ರೀತಿಯ ಸಂಘಳು ಸ್ಥಾಪನೆಯಾಗಿ ತಮ್ಮ ಕೈಲಾಗುವಷ್ಟು ಕಾರ್ಯಗಳನ್ನು ಶಾಲೆಗೆ ನೀಡುವ ಮೂಲಕ ಮಕ್ಕಳಿಗೆ ನೆರವಾಗಬೇಕು ಎಂದರು. ಅಲ್ಲದೆ ವಿದ್ಯಾರ್ಥಿಗಳಲ್ಲಿ ತಾವು ಸಹ ಓದು ಮುಗಿದ ನಂತರ ಈ ಹಿರಿಯ ವಿದ್ಯಾರ್ಥಿ ಸಂಘಕ್ಕೆ ಸೇರಿ ಶಾಲೆಗೆ ಏನಾದರೂ ಕೊಡುಗೆ ನೀಡೋಣ ಎಂಬ ಮನೋಭಾವ ಮೂಡುವಂತಹ ಕಾರ್ಯವನ್ನು ಈ ಸಂಘ ಮಾಡಲಿ ಎಂದು ಆಶಿಸಿದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ತಮ್ಮಯ್ಯ ಮಾತನಾಡಿ ತಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳು ಈ ಸಂಘ ಸ್ಥಾಪನೆ ಮಾಡಿಕೊಂಡು ಶಾಲೆಗೆ ನೆರವಾಗಲು ಹೊರಟಿರುವುದು ಶ್ಲಾಘನೀಯ ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ.ಎನ್.ಮೂರ್ತಿ ಮಾತನಾಡಿ, ನಮಗೆ ವಿದ್ಯೆ ಕಲಿಸಿದ ಗುರುಗಳನ್ನು ಹಾಗೂ ಶಾಲೆಯನ್ನು ಮರೆಯದೆ ತಮ್ಮಿಂದಾಗುವ ಸೇವೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲೆಯಲ್ಲಿ ಉಪನ್ಯಾಸಕರು ಹೇಳುವ ಪಠ್ಯವನ್ನು ಗಮನವಿಟ್ಟು ಕೇಳುವುದರಿಂದ ಹೆಚ್ಚು ಮನನ ಮಾಡಿಕೊಳ್ಳಬಹುದು ಹಾಗೂ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬಹುದಾಗಿದೆ ಎಂದು ತಿಳಿಸಿದರು. ತಮ್ಮ ಸಂಘಕ್ಕೆ ಸದಸ್ಯರಾಗಲು ಬಯಸುವ ಹಿರಿಯ ವಿದ್ಯಾರ್ಥಿಗಳು ಸಂಘದ ಕಾರ್ಯದರ್ಶಿ ಶರತ್(9632300369) ಸಂಪರ್ಕಿಸುವಂತೆ ಕೋರಿದರು.
ಪ್ರಾಂಶುಪಾಲ ಚಂದ್ರಪ್ಪ ಅಧ್ಯಕ್ಷತೆವಹಿಸಿದ್ದು, ಸಂಘದ ಉಪಾಧ್ಯಕ್ಷ ಸಯ್ಯದ್ ಇಸ್ರಾರ್ ಆಲಿ, ಸಹಕಾರ್ಯದರ್ಶಿ ದರ್ಶನ್, ಸಯ್ಯದ್ ವಾಯಿದ್,ಪದಾಧಿಕಾರಿಗಳಾದ ಲಕ್ಷ್ಮಿಕಾಂತ, ಮುತ್ತುರಾಜ್, ಅರ್ಪಿತ, ತೇಜಸ್ಸ್,ಭವ್ಯಶ್ರೀ,ರಾಕೇಶ್,ಅನಿಲ್,ಸುನಿಲ್ ಕುಮಾರ್, ಕೇಶವವರ್ಧನ, ನವೀನ್, ಚೇತನ್,ರಂಗನಾಥ,ತೇಜಸ್ವಿನಿ,ಚೈತ್ರ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ