ಕೃಷಿ ಇಲಾಖೆವತಿಯಿಂದ ಒರಟು ಧಾನ್ಯಗಳ ಅಭಿವೃದ್ದಿ ಯೋಜನೆಯಡಿ ರಾಗಿ ಬೆಳೆ ಇಳುವರಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಹೋಬಳಿಯ ಕೆಂಕೆರೆ ಮಜುರೆ ಗೌಡಗೆರೆ ಭಾಗದ ರೈತರುಗಳಿಗೆ ಉಚಿತ ರಾಗಿ ಹಾಗೂ ಗೊಬ್ಬರವನ್ನು ವಿತರಿಸಲಾಯಿತು.
ಹುಳಿಯಾರು ಹೋಬಳಿ ಗೌಡಗೆರೆಯ ರೈತರಿಗೆ ಕೃಷಿ ಇಲಾಖೆವತಿಯಿಂದ ಉಚಿತ ಬಿತ್ತನೆ ರಾಗಿ ವಿತರಿಸಲಾಯಿತು. |
ಜಿ.ಪಂ.ಸದಸ್ಯೆ ಮಂಜುಳಾ ರೈತರಿಗೆ ಬಿತ್ತನೆ ರಾಗಿ,ಜಿಪ್ಸಂ,ಬೋರೆಕ್ಸ್ ಮತ್ತು ಕಾಂಪೋಸ್ಟ್ ಗೊಬ್ಬರ ವಿತರಿಸಿದರು.ನಂತರ್ ಮಾತನಾಡಿದ ಬಿತ್ತನೆ ಬೀಜ ಪಡೆದ ರೈತರು ಬಿತ್ತನೆ ಹಾಗೂ ಸೂಕ್ತ ಸಮಯದಲ್ಲಿ ಗೊಬ್ಬರ ಕೊಟ್ಟು ಹೆಚ್ಚಿನ ಇಳುವರಿ ಪಡೆಯುವಂತೆ ಹಾಗೂ ಬಳಕೆಗೂ ಮೀರಿ ಹೆಚ್ಚಳವಾದ ರಾಗಿಯನ್ನು ಎಪಿಎಂಸಿ ಮಾರಾಟ ಮಾಡಿ ಸರ್ಕಾರದ ಅನ್ನಭಾಗ್ಯ ಯೋಜನೆಗೆ ನೆರವಾಗಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಸೀತಾರಾಮಯ್ಯ, ಗ್ರಾ.ಪಂ.ಸದಸ್ಯೆ ನೇತ್ರಾವತಿ, ಕೃಷಿ ಅಧಿಕಾರಿ ಶಿವಣ್ಣ, ರೈತ ಅನುವುಗಾರ ಶಿವಣ್ಣ, ಮುಖಂಡರಾದ ದುರ್ಗಯ್ಯ,ಜಯಣ್ಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ