ಹುಳಿಯಾರು ಹೋಬಳಿ ಹೊಯ್ಸಳಕಟ್ಟೆಯ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು. ರಾಜ್ಯೋತ್ಸವದ ಅಂಗವಾಗಿ ಗ್ರಾಮವನ್ನು ಸ್ವಚ್ಚಗೊಳಿಸುವ ಕಾರ್ಯ ಕೈಗೊಂಡಿದ್ದರು. ಹುಳಿಯಾರು ಹೋಬಳಿ ಹೊಯ್ಸಳಕಟ್ಟೆಯಲ್ಲಿ ಕರವೇ ವತಿಯಿಂದ ರಾಜ್ಯೋತ್ಸವ ಆಚರಣೆ ನಡೆಯಿತು. ಧ್ವಜಾರೋಹಣದ ನಂತರ ಸಂಘದ ಪದಾಧಿಕಾರಿಗಳೆಲ್ಲಾ ಒಟ್ಟಾಗಿ ಸಾರ್ವಜನಿಕರನ್ನು ತಮ್ಮೊಟ್ಟಿಗೆ ಸೇರಿಸಿಕೊಂಡು ಗ್ರಾಮದ ಸ್ವಚ್ಚತಾ ಕಾರ್ಯಕ್ಕೆ ಮುಂದಾದರು. ರಸ್ತೆ ಅಕ್ಕಪಕ್ಕದಲ್ಲಿ ಬಿದ್ದಿದ್ದ ಕಸ ಕಡ್ಡಿಯನ್ನು ಒಂದೆಡೆ ಸಂಗ್ರಹಿಸಿದ್ದಲ್ಲದೆ, ಸ್ವಚ್ಚತೆಯ ಜನರಿಗೆ ತಿಳಿಸುತ್ತಾ ಸ್ವಚ್ಚಗ್ರಾಮದ ಬಗ್ಗೆ ಅರಿವು ಮೂಡುವಂತೆ ಮಾಡಿದರು. ಈ ಸಂದರ್ಭದಲ್ಲಿ ದಾನಿಗಳಾದ ರಾಮದಾಸಪ್ಪ, ನಿವೃತ್ತಶಿಕ್ಷಕ ವದ್ದಿಗಯ್ಯ ಹಾಗೂ ಕರವೇ ಅಧ್ಯಕ್ಷ ನಾಗರಾಜು ಪದಾಧಿಕಾರಿಗಳಾದ ಕೋದಂಡರಾಮ,ಗುಂಡ, ಸ್ವಾಮಿ,ರವಿ,ಕಿರಣ್ ಇತರರು ಉಪಸ್ಥಿತರಿದ್ದರು.
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070