ಹುಳಿಯಾರು ಹೋಬಳಿ ಯಳನಡು ಗ್ರಾಮದದಲ್ಲಿನ ಪುರಾತನ ಕಾಲದ ಕಲ್ಯಾಣಿಯಲ್ಲಿ ಬೆಳೆದಿದ್ದ ಬೇಲಿ, ಬಿದ್ದಿದ್ದ ಕಸಕಡ್ಡಿಯನ್ನು ಗ್ರಾಮದವರೆಲ್ಲಾ ಒಂದಾಗಿ ಸ್ವಚ್ಚ ಮಾಡಿದರು.
ಹುಳಿಯಾರು ಹೋಬಳಿ ಯಳನಡು ಗ್ರಾಮದಲ್ಲಿ ಸ್ಥಳಿಯರೆಲ್ಲಾ ಸೇರಿ ಗ್ರಾಮದ ಕಲ್ಯಾಣಿಯನ್ನು ಸ್ವಚ್ಚಗೊಳಿಸಿದರು. |
ಗ್ರಾಮದ ಈಶ್ವರದೇವಾಲಯದ ಬಳಿ ಇರುವ ಈ ಕಲ್ಯಾಣಿ ಕಳೆದ ನಾಲ್ಕು ವರ್ಷದಿಂದ ಮಳೆಯಿಲ್ಲದೆ ಬರಿದಾಗಿದ್ದು ಮುಳ್ಳುಗಿಡ ಸೇರಿದಂತೆ ಕಸಕಡ್ಡಿಯಿಂದ ತುಂಬಿದ್ದು sಸ್ವಚ್ಚತೆ ಬಗ್ಗೆ ಯಾರೂ ಗಮನಕೊಟ್ಟಿರಲಿಲ್ಲ. ಕಳೆದ ಕೆಲ ವರ್ಷಗಳಿಂದ ಈ ಕಲ್ಯಾಣಿಯಲ್ಲೇ ಗಣಪತಿ ವಿಸರ್ಜನೆ ಸಹ ಮಾಡಲಾಗುತ್ತಿತ್ತು. ನೀರಿಲ್ಲದೆ ಬರಿದಾಗಿದ್ದ ಈ ಕಲ್ಯಾಣಿಗೆ ಇದೀಗ ಮಳೆ ಬಂದು ಕಲ್ಯಾಣಿಯಲ್ಲಿ ನೀರು ಬರಲು ಪ್ರಾರಂಭವಾಗಿದೆ. ಇದನ್ನು ಕಂಡ ಗ್ರಾಮದ ಕೆಲ ಯುವಕರು ಒಟ್ಟಾಗಿ ಸೇರಿ ಸ್ಥಳಿಯರ ನೆರೆವಿನಲ್ಲಿ ಕಲ್ಯಾಣಿ ಸ್ವಚ್ಚಗೊಳಿಸುವ ಕಾರ್ಯ ಮಾಡಿದ್ದಾರೆ.
ಗ್ರಾಮದ ಯುವಕರೇ ಹಾರೆ,ಗುದ್ದಲಿ,ಬಾಂಡ್ಲಿ ಹಿಡಿದು ಸ್ವಚ್ಚತಾ ಈ ಕಾರ್ಯ ಮಾಡುತ್ತಿದ್ದನ್ನ ಕಂಡ ಗ್ರಾಮಸ್ಥರು ಸಹ ಜೊತೆಗೂಡಿ ಕಲ್ಯಾಣಿಯಲ್ಲಿ ಬಿದಿದ್ದ ಕಸಕಡ್ಡಿ, ಬೆಳೆದಿದ್ದ ಮುಳ್ಳುಗಿಡ,ಪೊದೆಯನ್ನು ಸಂಪೂರ್ಣ ತೆರವುಮಾಡಿದ್ದಾರೆ. ಒಟ್ಟಾರೆ ಸ್ಥಳಿಯರೇ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ