ಗ್ರಾಮದೇವತೆ ಶ್ರೀ ಹುಳಿಯಾರಮ್ಮನ ಕಾರ್ತಿಕ ಮಹೋತ್ಸವ ಸೋಮವಾರ ಸಂಜೆ ಅಪಾರ ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಘಾರದಲ್ಲಿ ಅದ್ದೂರಿಯಾಗಿ ಜರುಗಿತು.
ಹುಳಿಯಾರಿನ ಗ್ರಾಮದೇವತೆ ಹುಳಿಯಾರಮ್ನ ಕಾರ್ತಿಕೋತ್ಸವ ಅಪಾರ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ಜರುಗಿತು. |
ಕಾರ್ತಿಕೋತ್ಸವದ ಅಂಗವಾಗಿ ದೇವಾಲಯವನ್ನು ಬಾಳೆಕಂದು,ತಳಿರುತೋರಣ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದಲ್ಲದೆ, ಅಮ್ಮನವರಿಗೆ ವಿಶೇಷ ಪೂಜೆ,ಅಲಂಕಾರ ಮಾಡಲಾಗಿತ್ತು. ಸಂಜೆ ವೇಳೆಗೆ ದೇವಾಲಯದಲ್ಲಿ ಹಣತೆಗಳನ್ನು ಹಚ್ಚಿಟ್ಟು, ಹುಳಿಯಾರಮ್ಮನ ಉತ್ಸವ ಮೂರ್ತಿಯನ್ನು ಬಗೆಬಗೆಯ ಹೂಗಳಿಂದ ಅಲಂಕರಿಸಿ ಸಕಲ ವಾದ್ಯಗಳ ನಾದದಲ್ಲಿ ಜೈಕಾರ ಹಾಕುವ ಮೂಲಕ ಅಮ್ಮನವರನ್ನು ಹೊರಡಿಸಲಾಯಿತು. ನಂತರ ಅಮ್ಮನವರ ಮೂಲಸ್ಥಾನ,ರಂಗನಾಥಸ್ವಾಮಿ ದೇವಾಲಯ, ಕೆಂಚಮ್ಮನ ದೇವಾಲಯಗಳಲ್ಲಿಗೆ ತೆರಳಿ ಪೂಜೆ ಸಲ್ಲಿಸಲಾಯಿತು.
ಮದಾಸಿ ಕುಣಿತದಲ್ಲಿ ಅಮ್ಮನವರನ್ನು ದೇವಾಲಯದಲ್ಲಿಗೆ ಕರೆದೊಯ್ದು ದೇವಾಲಯದ ಮುಂಭಾಗದಲ್ಲಿ ಕಾರ್ತಿಕ ಮಾಸದ ಪ್ರಾರಂಭದಲ್ಲಿ ಏರಿಸಿದ್ದ
ದೀಪಕ್ಕೆ ಪೂಜೆ ಸಲ್ಲಿಸಿ ಬಳಿಕ ದೀಪವನ್ನು ಕೆಳಗೆ ಇಳಿಸುವ ಮೂಲಕ ಕಾರ್ತಿಕೋತ್ಸವಕ್ಕೆ ತೆರೆ ಎಳೆಯಲಾಯಿತು.
ಈ ವೇಳೆ ಪಟ್ಟಣ ಸೇರಿದಂತೆ ಸುತ್ತಮುತ್ತಮ ಹಳ್ಳಿಗಳ ಅಪಾರ ಸಂಖ್ಯೆ ಭಕ್ತರು ಆಗಮಿಸಿದ್ದು ಅಮ್ಮನವರ ದರ್ಶನ ಹಾಗೂ ಅಮ್ಮನವರ ಕುಣಿತವನ್ನು ಕಣ್ತುಂಬಿಕೊಂಡರು. ಭಕ್ತರಿಗಾಗಿ ದೇವಾಲಯ ಸಮಿತಿಯಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯ ಸಮಿತಿಯ ಅಧ್ಯಕ್ಷ ನರೇಂದ್ರಬಾಬು, ಕಾರ್ಯದರ್ಶಿ ದುರ್ಗಪ್ಪ, ಬಡಗಿರಾಮಣ್ಣ, ಬೀರಪ್ಪ, ನಾಗರಾಜು,ಮಿಲ್ ಶಿವಣ್ಣ,ಚಂದ್ರಶೇಖರ್,ಟೈಲರ್ ಗೋಪಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ