ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ಗ್ರಾಮದೇವತೆ ಕಾಳಿಕಾಂಭ ದೇವಿ ಹಾಗೂ ದಮ್ಮಡಿಹಟ್ಟಿ ಈರಬೊಮ್ಮಕ್ಕ ದೇವರುಗಳೊಂದಿಗೆ ಹೊಳಲ್ಕೆರೆರಾಮೇಶ್ವರಸ್ವಾಮಿ ವೈಭವಯುತ ಉತ್ಸವ ನಡೆಯಿತು.
ಉತ್ಸವದ ಅಂಗವಾಗಿ ಸ್ವಾಮಿಗೆ ಅಭಿಷೇಕ , ಅರ್ಚನೆ ಮಾಡಿ ನಂತರ ಅಲಂಕರಿಸಿ ಕಾಳಮ್ಮದೇವಿ ಹಾಗೂ ಈರಬೊಮ್ಮಕ್ಕ ದೇವರುಗಳ ಸಮೇತ ಸಕಲ ವಾದ್ಯದೊಂದಿಗೆ ಸ್ವಾಮಿಯನ್ನು ಕರೆತಂದು ಅಲಂಕೃತ ರಥದಲ್ಲಿ ಸ್ವಾಮಿಯನ್ನು ಕುಳ್ಳಿರಿಸಿ , ಜೈಕಾರ ಹಾಕುತ್ತಾ ರಥವನ್ನೆಳೆದು ಉತ್ಸವ ಪ್ರಾರಂಭಿಸಿದರು. ಉತ್ಸವಕ್ಕೆ ಮಹಿಳಾ ವೀರಗಾಸೆ ನೃತ್ಯ ಮೆರುಗುತಂದಿತ್ತು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ರಾಮೇಶ್ವರ ಸ್ವಾಮಿ ಉತ್ಸವ ವೈಭವಯುತವಾಗಿ ನಡೆಯಿತು |
ಗ್ರಾಮದ ಚನ್ನಬಸವೇಶ್ವರ ಸ್ವಾಮಿ ದೇವಾಲದಿಂದ ಪ್ರಾರಂಭವಾದ ಉತ್ಸವ ಊರಿನ ಬೀದಿಗಳಲ್ಲಿ ಸಾಗಿತು. ಗ್ರಾಮದ ಅಪಾರ ಸಂಖ್ಯೆಯ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಸ್ವಾಮಿ ದರ್ಶನ ಪಡೆದು, ಹಣ್ಣುಕಾಯಿ ಮಾಡಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ