ಕನ್ನಡನಾಡಿನಲ್ಲಿರುವ ಪ್ರತಿಯೊಬ್ಬರಲ್ಲೂ ಕನ್ನಡ ಭಾಷೆ, ನೆಲ,ಜಲ ಹಾಗೂ ಕನ್ನಡ ಸಾಹಿತ್ಯದ ಮೇಲೆ ಅಭಿಮಾನ ಮೂಡಿದಾಗ ಮಾತ್ರ ರಾಜ್ಯೋತ್ಸವದ ಆಚರಣೆಗೆ ಸಾರ್ಥಕತೆ ಬರುತ್ತದೆ ಎಂದು ಪ್ರಾಂಶುಪಾಲ ಹಾಗೂ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.
![]() |
ಹುಳಿಯಾರು-ಕೆಂಕೆರೆ ಬಿಎಂಎಸ್ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಪ್ರಾಂಶುಪಾಲ ಬಿಳಿಗೆರೆ ಕೃಷ್ಣಮೂರ್ತಿ ಕನ್ನಡ ನಾಡುನುಡಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು |
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯ ಅಧ್ಯಕ್ಷತೆವಹಿಸಿದ್ದ ಅವರು ಕನ್ನಡ ನಾಡುನುಡಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಪ್ರಸ್ತುತದಲ್ಲಿ ಆಂಗ್ಲಭಾಷೆಯ ಅತಿಯಾದ ವ್ಯಾಮೋಹ ಕನ್ನಡ ಭಾಷೆಯ ಬೆಳವಣಿಗೆಗೆ ಕುತ್ತು ತಂದಿದ್ದು ನಮ್ಮ ಕನ್ನಡದೊಂದಿಗೆ ಇಂಗ್ಲಿಷ್ ಸೇರಿ ಕನ್ನಡ ಭಾಷೆಯ ಹಿರಿಮೆಯನ್ನು ಮೂಲೆಗುಂಪಾಗುವಂತೆ ಮಾಡಿದೆ ಎಂದು ವಿಷಾದಿಸಿದರು. ಕನ್ನಡ ಭಾಷೆ ಕನ್ನಡ ನಾಡಿನಲ್ಲಿ ಶಾಶ್ವತವಾಗಿ ನೆಲೆ ನಿಲ್ಲಬೇಕಾದರೆ ನಿತ್ಯದ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಹಾಗೂ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಕನ್ನಡದ ಐತಿಹ್ಯದ ಕುರಿತ ವಿಚಾರಗಳನ್ನು ತಿಳಿಸಬೇಕು, ವಿದ್ಯಾರ್ಥಿಗಳೇ ಸ್ವಂಪ್ರೇರಿತರಾಗಿ ಕನ್ನಡದಲ್ಲಿ ಸಣ್ಣಕಥೆ, ಪದ್ಯ,ಕವನ,ನಾಟಕಗಳನ್ನು ರಚಿಸುವಂತೆ ಶಿಕ್ಷಕರು ಪ್ರೇರೇಪಣೆ ಮಾಡಬೇಕು ಎಂದರು.
ಈ ವೇಳೆ ಹಿರಿಯ ಉಪನ್ಯಾಸಕರಾದ ಸಯ್ಯದ್ ಇಬ್ರಾಹಿಂ, ಶಂಕರಲಿಂಗಯ್ಯ, ಶ್ರೀನಿವಾಸಪ್ಪ, ಚಂದ್ರಮೌಳಿ, ದೈಹಿಕ ಶಿಕ್ಷಕ ಶಿವಯ್ಯ, ಹನುಮಂತಪ್ಪ, ಗ್ರಂಥಪಾಲಕ ಲೋಕೇಶ್, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ