ಹುಳಿಯಾರು ಹೋಬಳಿ ಗಾಣಧಾಳು ಗ್ರಾಮದಲ್ಲಿ ರಸ್ತೆಯಲ್ಲಿ ಸೇತುವೆ ಮೇಲಿನ ಭಾಗ ಕುಸಿದು ಗುಂಡಿ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಹುಳಿಯಾರು ಹೋಬಳಿ ಗಾಣಧಾಳು ಗ್ರಾಮದ ರಸ್ತೆಯಲ್ಲಿ ಸೇರುವೆ ಕಲ್ಲು ಮುರಿದು ಬಿದ್ದಿರುವ ಗುಂಡಿ ತೋರಿಸುತ್ತಿರುವ ಸ್ಥಳಿಯರು. |
ಗಾಣಧಾಳು-ಮೇಲನಹಳ್ಳಿ ರಸ್ತೆ ಗಾಣಧಾಳು ಗ್ರಾಮದ ಮೂಲಕ ಹಾದು ಹೋಗಿದ್ದು ಗ್ರಾಮದ ಮಧ್ಯಭಾಗದ ರಸ್ತೆಯಲ್ಲಿನ ಸೇತುವೆ ಮೇಲಿನ ಭಾಗ ಕುಸಿದು ಗುಂಡಿ ಬಿದ್ದಿದೆ. ಇಲ್ಲಿ ನಿತ್ಯ ಎತ್ತಿನಗಾಡಿ, ಜಾನುವಾರುಗಳು, ಶಾಲಾಮಕ್ಕಳು, ಬಸ್, ಹಾಲಿನ ವಾಹನ,ಆಟೋಗಳು ಸೇರಿದಂತೆ ಇತರೆ ವಾಹನಗಳು ಓಡಾಡುತ್ತಿದ್ದು, ಗುಂಡಿ ದೊಡ್ಡದಾಗಿ ಮತ್ತೊಷ್ಟು ಸಮಸ್ಯೆಯಾಗುವ ಮೊದಲೇ ಅದನ್ನು ಸರಿಪಡಿಸುವ ಬಗ್ಗೆ ಸ್ಥಳೀಯ ಆಡಳಿತವಾಗಲಿ,ಜನಪ್ರತಿನಿಧಿಗಳಾಗಲಿ ಗಮನಹರಿಸಿಲ್ಲವೆಂದು ಆಕ್ಷೇಪಿಸಿದ್ದಾರೆ.
ಈ ಗುಂಡಿ ರಸ್ತೆ ತಿರುವಿನಲ್ಲೇ ಇರುವುದರಿಂದ ಅಪಾಯ ಸಂಭವಿಸುವ ಅವಕಾಶ ಹೆಚ್ಚಿದ್ದು ಶೀಘ್ರವೇ ಗುಂಡಿ ಮುಚ್ಚುವ ಕಾರ್ಯವನ್ನು ಸಂಬಂಧಪಟ್ಟ ಇಲಾಖೆಯವರು ಮಾಡುವಂತೆ ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ