ಹುಳಿಯಾರು ಹೋಬಳಿ ಬರಕನಹಾಳ್ ಗ್ರಾ.ಪಂ.ವ್ಯಾಪ್ತಿಯ ಬಾಲದೇವರಹಟ್ಟಿ ಗ್ರಾಮದಲ್ಲಿ ಶುಕ್ರವಾರ ಕೃಷಿಇಲಾಖೆವತಿಯಿಂದ ಭೂಚೇತನ ಯೋಜನೆಯಡಿ ತೊಗರಿ ಬೆಳೆ ಕ್ಷೇತ್ರೋತ್ಸವ ನಡೆಯಿತು.
ಹುಳಿಯಾರು ಹೋಬಳಿ ಬಾಲದೇವರಹಟ್ಟಿ ಗ್ರಾಮದಲ್ಲಿ ಕೃಷಿ ಇಲಾಖೆವತಿಯಿಂದ ಭೂಚೇತನ ಯೋಜನೆಯಡಿ ತೊಗರಿ ಬೆಳೆ ಕ್ಷೇತ್ರೋತ್ಸವ ನಡೆಯಿತು. |
ಕ್ಷೇತ್ರೋತ್ಸವದ ನೇತೃತ್ವ ವಹಿಸಿದ್ದ ಸಹಾಯಕ ಕೃಷಿ ನಿರ್ದೇಶಕ ಹೊನ್ನದಾಸೇಗೌಡ ಮಾತನಾಡಿ, ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ತೊಗರಿಯೂ ಸಹ ಒಂದಾಗಿದ್ದು, ಈ ಭಾಗದಲ್ಲಿ ಉತ್ತಮವಾಗಿದೆ. ಇದನ್ನು ರಾಗಿ ಬೆಳೆಯ ಅಕ್ಕಡಿ ಸಾಲಿನಲ್ಲಿ ಮಾತ್ರ ಹಾಕುವುದರ ಜೊತೆಗೆ ಪ್ರಮುಖ ಬೆಳೆಯಾಗಿಯೂ ಸಹ ಬೆಳೆಯಬಹುದಾಗಿದ್ದು ರೈತರು ಮುಂದಾಗಬೇಕಿದೆ ಎಂದರು.
ರೈತರು ಕೃಷಿ ಚಟುವಟಿಕೆಯಲ್ಲಿ ಸಾವಯವ ಗೊಬ್ಬರದ ಬಳಕೆಯನ್ನು ಮಾಡುವ ಮೂಲಕ ರಾಸಾಯನಿಕ ಗೊಬ್ಬರದ ಬಳಕೆಯನ್ನು ಹಂತಹಂತವಾಗಿ ಕಡಿಮೆ ಮಾಡಬೇಕು ಎಂದರು. ಎರೆಹುಳು ಗೊಬ್ಬರವನ್ನು ತಾವೇ ಸ್ವತ: ತಯಾರಿಸಿಕೊಂಡು ಬೆಳೆಗಳೀಗೆ ಹಾಕಬೇಕು, ರೈತರಿಗೆ ನಮ್ಮ ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಕ್ಲೋರೋ ಪೈರಿಫಾಸ್ , ಕ್ವಿನಾಲ್ ಫಾಸ್ ಮಾನೋಕ್ರೋಟೋ ಫಾಸ್ ಮತ್ತಿತರರ ಔಷಧಿಗಳು ರಿಯಾಯಿತಿ ದರದಲ್ಲಿ ದೊರೆಯುತ್ತಿವೆ, ಇದರ ಸದುಪಯೋವನ್ನು ಪಡೆಯುವಂತೆ ತಿಳಿಸಿದರು.
ಈ ವೇಳೆ ಜಿ.ಪಂ.ಸದಸ್ಯೆ ನಿಂಗಮ್ಮರಾಮಯ್ಯ ಕ್ಷೇತ್ರೋತ್ಸವ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷೆ ರಾಜಮ್ಮ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿಗಳಾದ ನೂರುಲ್ಲಾ, ಜೆ.ಕಿರಣ್, ಹನೀಫ್, ಎನ್.ಬಿ.ಶಿವಣ್ಣ, ಎಸ್.ಕೆ.ರಂಗನಾಥ್ ,ಕೆ.ಟಿ.ತಿಪ್ಪೇಸ್ವಾಮಿ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ