ಹುಳಿಯಾರು ಪಟ್ಟಣದ ಮಾರುತಿ ನಗರದಲ್ಲಿ ಹೋಬಳಿಯ ಅಂಗನವಾಡಿ ಮಕ್ಕಳಿಗಾಗಿ ಬುಧವಾರ ಆಯೋಜಿಸಿದ್ದ ಬಾಲಮೇಳ-2014 ರಲ್ಲಿ ಅಪಾರ ಸಂಖ್ಯೆಯ ಮಕ್ಕಳು ಪಾಲ್ಗೊಂಡು ಹಾಡಿ,ಕುಣಿಯುತ್ತಾ ತಮ್ಮ ಪ್ರತಿಭೆ ಹೊರಹಾಕಿದರು.
ಹುಳಿಯಾರಿನ ಮಾರುತಿನಗರದಲ್ಲಿ ನಡೆದ ಬಾಲಮೇಳದಲ್ಲಿ ಪುಟಾಣಿ ಮಕ್ಕಳು ಹಾಡು ಹಾಡುತ್ತಿರುವುದು. |
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಗ್ರಾ.ಪಂ.ಸದಸ್ಯೆ ಗೀತಾ ಅಶೋಕ್ ಬಾಬು ಮಾತನಾಡಿ, ಅಂಗನವಾಡಿಯ ಪುಟ್ಟ ಮಕ್ಕಳಿಗಾಗಿ ಇಂತಹ ಕಾರ್ಯಕ್ರಮ ರೂಪಿಸಿರುವುದು ಅವರಿಗೂ ಒಂದು ವೇದಿಕೆ ಕಲ್ಪಿಸಿದಂತಾಗುತ್ತದೆ. ಮಕ್ಕಳು ತಾವು ಕಲಿತ ಹಾಡು,ನೃತ್ಯ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಇಲ್ಲಿ ಪ್ರದರ್ಶನ ನೀಡುವುದರಿಂದ ಮುಂದಿನ ದಿನಗಳಲ್ಲಿ ಅವರ ಬೆಳವಣಿಗೆ ಉತ್ತಮವಾಗಿರುತ್ತದೆ ಎಂದರು. ಪ್ರತಿ ಅಂಗನವಾಡಿ ಕೇಂದ್ರದ ಶಿಕ್ಷಕಿಯರು ಮಕ್ಕಳನ್ನು ಶಿಕ್ಷಿಸದೆ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾ ಅವರನ್ನು ವಿವಿಧ ಚಟುವಟಿಕೆಗೆ ಸೆಳೆಯಬೇಕು ಎಂದರು.
ಬಾಲಮೇಳದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮಿ,, ತಾ.ಪಂ.ಸದಸ್ಯೆ ಬೀಬೀಫಾತೀಮಾ, ಗ್ರಾ.ಪಂ.ಸದಸ್ಯರಾದ ಅಶೋಕ್ ಬಾಬು, ಗೀತಾಬಾಬು, ವೆಂಕಟಮ್ಮ, ಜಹೀರ್ ಸಾಬ್, ಆಂಜನೇಯ ದೇವಾಲಯ ಸಮಿತಿಯ ನರಸಿಂಹಮೂರ್ತಿ, ಮುಖಂಡರಾದ ಧನಂಜಯ್, ಎಸ್‍ಆರ್‍ಎಸ್ ದಯಾನಂದ್, ಕರವೇ ಮೆಡಿಕಲ್ ಚಂಬಣ್ಣ, ಎಲ್.ಐ.ಸಿ ಕುಮಾರ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಹೋಬಳಿಯ ವಿವಿಧ ಅಂಗನವಾಡಿಯ 60ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ, ಸಾರ್ವಜನಿಕರು ಪಾಲ್ಗೊಂಡಿದ್ದರು. ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಾರುತಿ ಯುವ ಛಾರಿಟಬಲ್ ಟ್ರಸ್ಟ್ ನವರು ಮಕ್ಕಳಿಗೆ ಹಾಗೂ ಆಗಮಿಸಿದ್ದ ಪ್ರೇಕ್ಷಕರಿಗೆ ಉಪಹಾರ ವ್ಯವಸ್ಥೆ ಮಾಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ