ಹುಳಿಯಾರು ಪಟ್ಟಣದ ಶ್ರೀವಿರಭದ್ರೇಶ್ವರ ಸ್ವಾಮಿಯ 34 ನೇ ವರ್ಷದ ದೀಪೋತ್ಸವಕಾರ್ಯ ಇದೇ 22ರ ಶನಿವಾರ ಸಂಜೆ ನಡೆಯಲಿದೆ.
ದೀಪೋತ್ಸವದ ಅಂಗವಾಗಿ ಸ್ವಾಮಿಗೆ ಪುರೋಹಿತರಾದ ಮಲ್ಲಿಕಾರ್ಜುನಯ್ಯ ಹಾಗೂ ವೀರೇಶ್ ಸಂಗಡಿಗರಿಂದ ಅಭಿಷೇಕ,ಅರ್ಚನೆ ಹಾಗೂ ಅಲಂಕಾರ ಸೇವೆ ಸೇರಿದಂತೆ ವಿವಿಧ ಪೂಜಾಕೈಂಕರ್ಯ ನಡೆಯಲಿದೆ. ಸಂಜೆ ದೇವಾಲಯ ಆವರಣದಲ್ಲಿ ಹಣತೆಗಳನ್ನು ಹಚ್ಚುವ ಮೂಲಕ ಸ್ವಾಮಿಯ ಮಹಾಮಂಗಳಾರತಿ ನಡೆದು, ಪ್ರಸಾದವಿನಿಯೋಗ ನಡೆಯಲಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ದೇವಾಲಯ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ