ಕಾರ್ತೀಕ ಮಾಸದ ದ್ವಾದಶಿಯಾದ ಮಂಗಳವಾರದಂದು ಉತ್ಥಾನದ್ವಾದಶಿ ಪ್ರಯುಕ್ತ ಮಹಿಳೆಯರು ತುಳಸಿ ಹಬ್ಬವನ್ನು ಆಚರಿಸಿದರು. ತುಳಸಿಗಿಡ ಐಶ್ವರ್ಯ ಸಂಪತ್ತಿನ ಪ್ರತೀಕವಾಗಿದ್ದು ತುಳಸಿ ಪೂಜಿಸುವುದರಿಂದ ಪಾಪಗಳು ಕಳೆಯುತ್ತದಲ್ಲದೆ, ಸ್ಪರ್ಶ ಮಾತ್ರದಿಂದಲೇ ಪವಿತ್ರತೆ ಬರುತ್ತದೆ , ಅಕಾಲಿಕ ಮರಣ ತಡೆಯುತ್ತದೆಂಬ ನಂಬಿಕೆ ಎಲ್ಲರಲ್ಲೂ ಮನೆ ಮಾಡಿದ್ದು ಪ್ರತಿ ಮನೆಯಲ್ಲು ತುಳಸಿಗಿಡ ನೆಡುವುದು ವಾಡಿಕೆಯಾಗಿದೆ.
ತುಳಸಿಹಬ್ಬದ ಪ್ರಯುಕ್ತ ತುಳಸಿಕಟ್ಟೆಗೆ ತೋರಣ ಕಟ್ಟಿ,ರಂಗೋಲಿ ಬಿಟ್ಟು, ಕೃಷ್ಣನ ಮೂರ್ತಿಯನ್ನಿಟ್ಟು ಪೂಜಿಸಿದರು. ಅಗಸೆ ಹಾಗೂ ನೆಲ್ಲಿ ಕೊನೆಯನ್ನು ತುಳಸಿಕಟ್ಟೆಯಲ್ಲಿ ಸ್ಥಾಪಿಸಿ ಬೃಂದಾವನಕ್ಕೆ ಪೂಜೆಸಲ್ಲಿಸಿ ಅಕ್ಕಪಕ್ಕದ ಮನೆಯ ಮುತೈದೆಯರಿಗೆ ಅರಿಶಿನ ಕುಂಕುಮ ಹಾಗೂ ಪ್ರಸಾದ ಹಂಚಿದರು. ಸಂಜೆ ಬೃಂದಾವನವನ್ನು ದೀಪಗಳಿಂದ ಅಲಂಕರಿಸಿ, ನೆಲ್ಲಿಕಾಯಿಗೆ ಬತ್ತಿ ಇಟ್ಟು ದೀಪಾರತಿ ಮಾಡಿದರು. ಕೆಲವೆಡೆ ಮಕ್ಕಳು ಪಟಾಕಿಹಚ್ಚಿ ಸಂಭ್ರಮಿಸಿದರು.
![]() |
ಹುಳಿಯಾರಿನ ಮನೆಯೊಂದರಲ್ಲಿ ಉತ್ಥಾನ ದ್ವಾದಶಿ ಅಂಗವಾಗಿ ಗೃಹಣಿಯೊಬ್ಬರು ತುಳಸಿಗಿಡಕ್ಕೆ ಪೂಜೆ ಸಲ್ಲಿಸುತ್ತಿರುವುದು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ