ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್.ಘಟಕದ ಸಹಯೋಗದಲ್ಲಿ ಪ್ರಾಂಶುಪಾಲ ನಟರಾಜ್ ಅಧ್ಯಕ್ಷತೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಿ,ಸಿಹಿ ವಿತರಿಸಲಾಯಿತು.
ಹುಳಿಯಾರು-ಕೆಂಕೆರೆ ಪಿಯು ಕಾಲೇಜಿನಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ನಟರಾಜ್ ಬಹುಮಾನ ವಿತರಿಸಿದರು. |
ದಿನಾಚರಣೆಯ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ, ನೆಹರು ಕುರಿತು ಭಾಷಣಸ್ಪರ್ಧೆ,ಜನಸಂಖ್ಯಾ ಶಿಕ್ಷಣ ಕುರಿತು ಪ್ರಬಂಧ ಸ್ಫರ್ಧೆ ನಡೆಸಿ ವಿಜೇತರಾದ ಮಣಿಕಂಠ,ಅರ್ಪಿತ,ತುಂಗಾ,ಗಗನ,ಅಶ್ವಿನಿ ಎಂಬ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ನಟರಾಜ್ ಮಾತನಾಡಿ, ನೆಹರು ಅವರ ಜನ್ಮ ದಿನವನ್ನೇ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತಿದ್ದು, ನೆಹರುರವರ ಆದರ್ಶಗುಣಗಳನ್ನು ಇಂದಿನ ಮಕ್ಕಳು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಗಿ ಎಂದರು. ವಿದ್ಯಾರ್ಥಿಗಳು ಶಿಸ್ತು,ಶ್ರದ್ದೆಯನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಯಶಸ್ಸು ಲಭಿಸುತ್ತದೆ ಇದರಿಂದ ಪೋಷಕರಿಗೂ ಹಾಗೂ ಶಾಲೆಗೂ ಕೀರ್ತಿ ಬರುತ್ತದೆ ಎಂದರು.
ಈ ವೇಳೆ ಕಾಲೇಜು ಅಭಿವೃದ್ದಿ ಸಮಿತಿಯ ಜಲಾಲ್ ಸಾಬ್, ಉಪನ್ಯಾಸಕರಾದ ಶಿವಾನಂದ್,ಎಸ್.ಜಿ.ರಮೇಶ್,ಅನಂತಯ್ಯ, ಎನ್‍ಎಸ್‍ಎಸ್
ಅಧಿಕಾರಿ ಯೋಗೀಶ್, ಮಂಜುನಾಥ್,ಮಲ್ಲಿಕಾರ್ಜುನಯ್ಯ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ