ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಕನ್ನಡ ಕವಿಕಾವ್ಯ ಗೋಷ್ಠಿ ಪಾಕ್ಷಿಕ ಕಾರ್ಯಕ್ರಮ ಪಟ್ಟಣದ ವಸಂತನಗರ ಬಡಾವಣೆಯ ಗೋಪಾಲಕೃಷ್ಣ ಅವರ ನಿವಾಸದಲ್ಲಿ ನಡೆಯಿತು.
ನಂದಿಹಳ್ಳಿ ಶಾಲೆಯ ಶಿಕ್ಷಕ ಯಲ್ಲಪ್ಪ ತಮ್ಮ ಉಪನ್ಯಾಸದಲ್ಲಿ ಡಿವಿಜಿಯವರ ಮಂಕುತಿಮ್ಮನ ಕಗ್ಗ ಕುರಿತು ತಿಳಿಸುತ್ತಾ, ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು , ಎಲ್ಲರೊಳಗೊಂದಾಗು ಎಂಬ ಕಗ್ಗದ ಮೂಲಕ ಡಿವಿಜಿಯವರು ಕಂಡಂತೆ ಜೀವನದ ದರ್ಶನದ ಬಗ್ಗೆ ವ್ಯಾಖ್ಯಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕನಕದಾಸ ಪ್ರೌಢಶಾಲೆಯ ಶಿಕ್ಷಕ ಎನ್.ಬಿ.ಚಂದ್ರಪ್ಪ ಮಾತನಾಡಿ, ಡಿವಿಜಿಯವರ ಜೀವನವನ್ನು ಕುರಿತು ತಿಳಿಸಿದರಲ್ಲದೆ,ಅವರು ರಚಿಸಿದ ಕವಿತೆಗಳನ್ನು ಓದಿ ತಿಳಿಯುವಂತೆ ಹೇಳಿದರು.
ಕಸಾಪದ ತ.ಶಿ.ಬಸವಮೂರ್ತಿ ಅವರು ಸ್ವರಚಿತ ಕವಿತೆಗಳನ್ನು ಹಾಡುವ ಮೂಲಕ ಕನ್ನಡ ಸಾಹಿತ್ಯದ ಬಗ್ಗೆ ತಿಳಿಸಿದರು. ಶಿಕ್ಷಕ ಜಗದೀಶ್ ಪ್ರಾರ್ಥಿಸಿ, ರವಿ ನಿರೂಪಿಸಿ,ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ