ಹುಳಿಯಾರು ಪಟ್ಟಣದ ಎಂಪಿಎಸ್ ಶಾಲೆ, ವಾಸವಿಶಾಲೆ, ವಿದ್ಯಾವಾರಿಧಿ, ಕನಕದಾಸ ಶಾಲೆ, ಉರ್ದುಶಾಲೆ, ಮಾರುತಿ ಶಾಲೆ, ಬಸವೇಶ್ವರ ಶಾಲೆ, ಕೇಶವ ವಿದ್ಯಾಮಂದಿರ, ಜ್ಞಾನಜ್ಯೋತಿ,ಶಾರದಾ ಕಾನ್ವೆಂಟ್, ಹುಳಿಯಾರು-ಕೆಂಕೆರೆ ಪ್ರೌಢಶಾಲೆ ಹಾಗೂ ಅಂಗನವಾಡಿ ಕೇಂದ್ರಗಳು ಸೇರಿದಂತೆ ಪಟ್ಟಣದ ಎಲ್ಲಾ ಶಾಲೆಗಳಲ್ಲೂ ಶುಕ್ರವಾರದಂದು ಸಂಭ್ರಮದಿಂದ ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಅಧ್ಯಕ್ಷತೆಯಲ್ಲಿ ಮಕ್ಕಳ ದಿನಾಚರಣೆ ನಡೆಯಿತು. |
ವಾಸವಿ ಆಂಗ್ಲಶಾಲೆ ಹಾಗೂ ಟಿ.ಆರ್.ಎಸ್.ಆರ್ ಶಾಲೆಯಲ್ಲಿ ಮಕ್ಕಳದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದಲೇ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳನ್ನೇ ಅಧ್ಯಕ್ಷರನ್ನಾಗಿ ಮಾಡಿ, ಮಕ್ಕಳೇ ಸೇರಿ ಕಾರ್ಯಕ್ರಮ ನಿರೂಪಿಸುವ ಮೂಲಕ ಆಚರಿಸಲಾಯಿತು.
ವಾಸವಿ ಆಂಗ್ಲಶಾಲೆಯ ಕಾರ್ಯಕ್ರಮದಲ್ಲಿ 10ನೇ ತರಗತಿಯ ವಿದ್ಯಾರ್ಥಿ ವಿನಾಯಕ ಅಧ್ಯಕ್ಷತೆವಹಿಸಿದ್ದು, ಹರ್ಷಿಯಾ,ಲಕ್ಷಿಕಾಂತ್,ಹೇಮಂತ್,ಕಿರಣ್ ಕುಮಾರ್ ವೇದಿಕೆಯಲ್ಲಿದ್ದರು. ಸಹನ ನಿರೂಪಿಸಿ, ಅಪೂರ್ವ ಸ್ವಾಗತಿಸಿ,ಮೋನಿಕ ವಂದಿಸಿದರು.
ಟಿ.ಆರ್.ಎಸ್.ಆರ್ ಶಾಲೆಯಲ್ಲಿ ವಿದ್ಯಾರ್ಥಿನಿ ಹೇಮಲತಾ ಅಧ್ಯಕ್ಷತೆವಹಿಸಿದ್ದು,ಸಿಮ್ರಾನ್ ಖಾನ್,ಲಾವಣ್ಯ ಸಭೆಯಲಿದ್ದರು. ಸುಮಾರು 60ಕ್ಕೂ ಹೆಚ್ಚು ಮಕ್ಕಳು ನೆಹರು ಅವರ ಜೀವನದ ಸಾಧನೆಗಳ ಬಗ್ಗೆ ಚುಟುಕಾಗಿ ವಿವರಿಸಿದರು. ಮತ್ತೆ ಕೆಲ ಮಕ್ಕಳು ನಾಡಗೀತೆ,ಭಾವಗೀತೆಗಳನ್ನು ಹಾಡಿದರು. ನಂತರ ಮಕ್ಕಳಿಗೆ ಸಿಹಿವಿತರಿಸಲಾಯಿತು. ಮುಖ್ಯಶಿಕ್ಷಕ ರಮೇಶ್ ಸೇರಿದಂತೆ ಸಹಶಿಕ್ಷಕರು ಮಕ್ಕಳಿಗೆ ಕಾರ್ಯಕ್ರಮ ಅಯೋಜನೆ ಬಗ್ಗೆ ಸಲಹೆಗಳನ್ನು ನೀಡುವ ಮೂಲಕ ಕಾರ್ಯಕ್ರಮ ನಡೆಸಿದರು.
ಆಜಾದ್ ನಗರದ ಅಂಗನವಾಡಿ ಕೇಂದ್ರದಲ್ಲಿ ತಾ.ಪಂ. ಹಾಗೂ ಗ್ರಾ.ಪಂ ಸದಸ್ಯರುಗಳು ಸೇರಿ ಅಂಗನವಾಡಿಶಿಕ್ಷಕಿ ಪೂರ್ಣಮ್ಮನವರ ನೇತೃತ್ವದಲ್ಲಿ ಸ್ವಚ್ಚತಾ ಆಂದೋಲನದ ಮೂಲಕ ಮಕ್ಕಳ ದಿನಾಚರಣೆ ಆಚರಿಸಲಾಯಿತು. ತಾ.ಪಂ.ಸದಸ್ಯೆ ಬೀಬೀ ಫಾತೀಮಾ, ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ, ಸದಸ್ಯರಾದ ವೆಂಕಟಮ್ಮ, ಹಸೀನಾ,ಅಹಮದ್ ಖಾನ್, ಗೀತಾ,ಅಶೋಕ್ ಬಾಬು ಸೇರಿದಂತೆ ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶ್ರೀಮತಿ ಕವಿತಾಕಿರಣ್ ಕುಮಾರ್ ನೇತೃತ್ವದಲ್ಲಿ ಮಕ್ಕಳಿಗೆ ನೆಹರು ಅವರ ಸಾಧನೆಗಳ ಬಗ್ಗೆ ತಿಳಿಸಲಾಯಿತು. ಶಿಕ್ಷಕರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲ ರವಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ