ಹುಳಿಯಾರು ಹೋಬಳಿ ವೈ.ಎಸ್.ಪಾಳ್ಯದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸ್ವಚ್ಚ ಭಾರತ ಅಭಿಯಾನದಡಿ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳು ಶಾಲಾ ಆವರಣ ಸ್ವಚ್ಚಗೊಳಿಸಿದರು.
ಹುಳಿಯಾರು ಸಮೀಪದ ವೈ.ಎಸ್.ಪಾಳ್ಯದ ಉರ್ದು ಶಾಲಾಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾವರಣ ಸ್ವಚ್ಚಗೊಳಿಸುತ್ತಿರುವುದು.
|
ಪುಟ್ಟ ಮಕ್ಕಳೇ ಪೊರಕೆ ಹಿಡಿದು ಶಾಲಾ ಆವರಣದಲ್ಲಿ ಬಿದ್ದಿದ್ದ ಕಸವನ್ನೆಲ್ಲಾ ಒಂದೆಡೆ ಶೇಖರಿಸಿದ್ದರಲ್ಲದೆ, ಆವರಣದಲ್ಲಿ ಬೆಳೆದಿದ್ದ ಕಳೆಸಸ್ಯಗಳನ್ನು ಕಿತ್ತು ಹಾಕುವ ಮೂಲಕ ಸ್ವಚ್ಚತೆಗೊಳಿಸುವಲ್ಲಿ ಮುಂದಾಗಿದ್ದರು. ಪ್ರಧಾನಿ ಮೋದಿಯವರ ಸ್ವಚ್ಚಭಾರತದ ಅಭಿಯಾನಡಿ ಇಡಿ ದೇಶವನ್ನೇ ಸ್ವಚ್ಚಗೊಳಿಸುವ ಕಾರ್ಯ ಕೈಗೊಂಡಿದ್ದಾರೆ ಅದರಂತೆ ನಾವುಗಳು ಸಹ ನಮ್ಮ ಸುತ್ತಮುತ್ತಲಿನ ಜಾಗವನ್ನು ಸ್ವತ: ನಾವೇ ಸ್ವಚ್ಚವಾಗಿಟ್ಟುಕೊಳ್ಳುವುದರಿಂದ
ಅನೈರ್ಮಲ್ಯವನ್ನು ತೊಲಗಿಸಬಹುದಾಗಿ ಎಂದು ಮುಖ್ಯಶಿಕ್ಷಕ ಜಯಪ್ರಕಾಶ್ ತಿಳಿಸಿದರು.
ನಮ್ಮ ಮನೆ,ರಸ್ತೆ ಬದಿಯ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿದ್ದರೆ, ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ಸ್ವಚ್ಚತೆಯಿಂದಾಗುವ ಪ್ರಯೋಜನದ ಬಗ್ಗೆ ಶಾಲಾಮಕ್ಕಳಿಗೆ ಮಾಹಿತಿ ನೀಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ