ಇಲ್ಲಿನ ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿಯ ಕಾರ್ತಿಕೋತ್ಸವದ ಅಂಗವಾಗಿ ಬಾಳೆದಿಂಡಿನಿಂದ ಮಾಡಲಾಗಿದ್ದ ಅಲಂಕಾರ ಭಕ್ತರ ಮನ ಸೆಳೆಯಿತು.
|
ಹುಳಿಯಾರು ಗ್ರಾಮದೇವತೆ ದುರ್ಗಮ್ಮನವರ ಕಾರ್ತಿಕದ ಅಂಗವಾಗಿ ಮೂಲದೇವತೆಗೆ ಕದಳಿ ಅಲಂಕಾರ ಮಾಡಿದ್ದು ಆಕರ್ಷಕವಾಗಿತ್ತು. |
|
ಹುಳಿಯಾರು ಗ್ರಾಮದೇವತೆ ದುರ್ಗಮ್ಮನವರ ಕಾರ್ತಿಕೋತ್ಸವದಲ್ಲಿ ಉತ್ಸವಮೂರ್ತಿ ಕುಣಿತ. |
ಬುಧವಾರ ಸಂಜೆ ಅಪಾರ ಸಂಖ್ಯೆಯ ಭಕ್ತರ ಹಷೋದ್ಘಾರದಲ್ಲಿ ನಡೆದ ಕಾರ್ತಿಕೋತ್ಸವದ ಅಂಗವಾಗಿ ದುರ್ಗಮ್ಮನ ಮೂಲವಿಗ್ರಹಕ್ಕೆ ವಿಶೇಷ ಪೂಜೆ, ಅಭಿಷೇಕ,ಅರ್ಚನೆ ನಡೆಯಿತು. ಸಂಜೆ ವೇಳೆಗೆ ಉತ್ಸವ ಮೂರ್ತಿಯನ್ನು ಬಗೆಬಗೆಯ ಹೂಗಳಿಂದ ಅಲಂಕರಿಸಿದ್ದರು. ಸಕಲ ವಾದ್ಯ ಸಮೇತ ಅಮ್ಮನವರನ್ನು ಹೊರಡಿಸಿ ದೇವಾಲಯದ ಮುಂಭಾಗದಲ್ಲಿನ ದೀಪವನ್ನು ಅರ್ಧಕ್ಕೆ ಇಳಿಸಿ ನಂತರ ಮಹಾಮಂಗಳಾರತಿ ನಡೆಸಿ, ಪ್ರಸಾದ ವಿತರಿಸಿದರು. ಈ ವೇಳೆ ದೇವಾಲಯ ಕಮಿಟಿಯ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಹು.ಕೃ.ವಿಶ್ವನಾಥ್, ಸದಸ್ಯರಾದ ಪಟೇಲ್ ರಾಜ್ ಕುಮಾರ್, ಈಶ್ವರಯ್ಯ ಕಮಿಟಿಯ ಪದಾಧಿಕಾರಿಗಳು ಹಾಗೂ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ