ಡೀಸೆಲ್ ಬೆಲೆ ಇಳಿಕೆಯಾಗಿದ್ದರೂ ಸಹ ಬಸ್ ನ ಪ್ರಯಾಣ ದರದಲ್ಲಿ ಸ್ವಲ್ಪವೂ ಇಳಿಕೆಯಾಗದಿರುವುದು ಪ್ರಯಾಣಿಕರಿಗೆ ಹೊರೆಯಾಗಿದ್ದು, ಈ ಬಗ್ಗೆ ಸಾರಿಗೆ ಇಲಾಖೆ ಗಮನ ಮಾಡಿ ಬಸ್ ನ ಪ್ರಯಾಣದರವನ್ನು ಇಳಿಕೆ ಮಾಡುವಂತೆ ರಾಜ್ಯ ಹಸಿರುಸೇನೆಯ ಸಂಚಾಲಕ ಕೆಂಕೆರೆ ಸತೀಶ್ ಒತ್ತಾಯಿಸಿದ್ದಾರೆ.
ಕೆಂಕೆರೆ ಸತೀಶ್. |
ಡೀಸೆಲ್ ಬೆಲೆ ಮಧ್ಯರಾತ್ರಿ ಏರಿಕೆಯಾದರೆ ಬೆಳಿಗ್ಗಿನಿಂದಲೇ ಬಸ್ ಟಿಕೆಟ್ ದರದಲ್ಲಿ ಹೆಚ್ಚಳ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಸರ್ಕಾರಿ ಹಾಗೂ ಖಾಸಗಿ ಬಸ್ ನವರು ಇದೀಗ ಡೀಸೆಲ್ ದರ ಇಳಿಯಾಗಿದ್ದರೂ ಸಹ ಪ್ರಯಾಣ ದರದಲ್ಲಿ ಕಡಿಮೆ ಮಾಡಿಲ್ಲ. ಪ್ರಸ್ತುತದ ದಿನಗಳಲ್ಲಿ ನಿತ್ಯ ಬಳಕೆಯ ಸಾಕಷ್ಟು ವಸ್ತುಗಳ ದರದ ಹೆಚ್ಚಳದಿಂದಾಗಿ ಜನಸಾಮಾಯರಿಗೆ ಹೆಚ್ಚಿನ ಹೊರೆಯಾಗಿದೆ. ಜನರು ತಮಗೆ ಬರುವ ಆದಾಯದಲ್ಲಿ ಉಳಿಕೆಗಿಂತ ಖರ್ಚಿನ ಪ್ರಮಾಣವೇ ದುಪ್ಪಟ್ಟಾಗಿದ್ದು ಜೀವನ ನಿರ್ವಹಣೆಗೆ ತೊಂದರೆಯಾಗಿತ್ತಿದೆ. ಇಂತಹದವರ ಮಧ್ಯೆ ಇದೀಗ ಡೀಸೆಲ್ ಬೆಲೆ ಇಳಿದಿದ್ದರೂ ಸಹ ಪ್ರಯಾಣದರಲ್ಲಿ ಕಡಿಮೆ ಮಾಡದಿರುವುದು ತೊಂದರೆಯಾಗಿದೆ ಪರಿಣಮಿಸಿದೆ ಎನ್ನುತ್ತಾರೆ.
ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ಗಮನ ಮಾಡಿ ಸರ್ಕಾರಿ ಹಾಗೂ ಖಾಸಗಿ ಬಸ್ ನ ಟಿಕೆಕ್ ದರವನ್ನು ಪ್ರತಿ ಕಿ.ಮೀ ಗೆ ಇಂತ್ತಿಷ್ಟು ಪ್ರಮಾಣದಲ್ಲಿ ಕಡಿಮೆ ಮಾಡುವ ಮೂಲಕ ಜನಸಾಮಾನ್ಯರ ಮೇಲಿನ ಹೊರೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ