ಹುಳಿಯಾರು ಪಟ್ಟಣಕ್ಕೆ ಆಗಮಿಸಿದ ಹೊಳಲ್ಕೆರೆ ರಾಮೇಶ್ವರ ಸ್ವಾಮಿಯನ್ನು ಭಕ್ತರು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿದರು.
ಹುಳಿಯಾರಿಗೆ ಆಗಮಿಸಿದ ರಾಮೇಶ್ವರಸ್ವಾಮಿಯನ್ನು ಭಕ್ತರ ಮನೆಗಳಿಗೆ ಕರೆದೊಯ್ಯುತ್ತಿರುವುದು. |
ಹೊಳಲಕ್ಕೆರೆ ಪ್ರಸನ್ನ ರಾಮೇಶ್ವರಸ್ವಾಮಿಗೆ ತನ್ನದೇ ಆದ ಐತಿಹ್ಯವಿದ್ದು, ಪುರಾಣಕಾಲದಲ್ಲಿ ಶ್ರೀ ರಾಮಲಕ್ಷ್ಮಣರು ಸೀತೆಯನ್ನು ಅರಸುತ್ತಾ ಬಂದಾಗ ಈ ಭಾಗದಲ್ಲಿ ನೆಲೆನಿಂತಿದ್ದು ಇಲ್ಲಿ ಶಿವಲಿಂಗ ಪ್ರತಿಷ್ಢಾಪಿಸಿ ಪೂಜಿಸಿದರು ಎಂಬ ಪ್ರತೀತಿ ಇದ್ದು, ಸ್ವಾಮಿಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯ ಒಕ್ಕಲಿನವರಿದ್ದು, ಸ್ವಾಮಿಗೆ ಹೆಚ್ಚು ಮಹತ್ವವಿದೆ. ಕಳೆದ ಒಂದು ವಾರದ ಹಿಂದೆ ಕೆಂಕೆರೆಯಲ್ಲಿನ ಭಕ್ತರ ಮನೆಗಳಿಗೆ ಕರೆದುಕೊಂಡು ಬಂದಿದ್ದ ಸ್ವಾಮಿಯನ್ನು ಮಂಗಳವಾರ ವಾಪಸ್ ಹೊಳಲ್ಕೆರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಹುಳಿಯಾರಿನ ಬಸ್ ಏಜೆಂಟ್ ವಿಶ್ವಣ್ಣ ಹಾಗೂ ಪಟ್ಟಣದ ಇತರ ಕೆಲ ಭಕ್ತರ ಮನೆಗಳಿಗೆ ತೆರಳಿ ಪೂಜೆ ಸಲ್ಲಿಸಿ, ಮಡಿಲಕ್ಕಿ ಹಾಕಿಸಿಕೊಂಡು, ಪನಿವಾರ ವಿತರಿಸಲಾಯಿತು. ಸ್ವಾಮಿಯ ಜೊತೆ ಅಪಾರ ಸಂಖ್ಯೆ ಭಕ್ತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ