ಗ್ರಾಮದಲ್ಲಿ ಅತಿ ಅವಶ್ಯಕವಿರುವ ಪಶುಆಸ್ಪತ್ರೆ ,ಅಂಗನವಾಡಿ ಕೇಂದ್ರ ಹಾಗೂ ಸೊಸೈಟಿ ನಿರ್ಮಾಣಕ್ಕೆ ತಮ್ಮ ನಿಧಿಯಿಂದ ಅನುದಾನ ಬಿಡುಗÀಡೆ ಮಾಡುವುದಾಗಿ ಸಂಸದ ಮುದ್ದಹನುಮೇಗೌಡ ಭರವಸೆ ನೀಡಿದರು.
ಹುಳಿಯಾರು ಹೋಬಳಿ ಕೆಂಕರೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ಮುದ್ದಹನುಮೇಗೌಡ ಉದ್ಘಾಟಿಸಿದರು. |
ಸಂಸದ ನಡಿಗೆ , ಜನಸಾಮಾನ್ಯರೆಡೆಗೆ ಕಾರ್ಯಕ್ರಮದಂತೆ ಹೋಬಳಿಯ ಕೆಂಕೆರೆ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ್ದ ಅವರು ಕಾರ್ಯಕ್ರಮ ಉದ್ಘಾಟಿಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದರು.
ತಾನು ಈ ಕಾರ್ಯಕ್ರಮ ಕೈಗೊಂಡಿರುವುದು ಪಕ್ಷದ ಪ್ರಚಾರಕ್ಕಲ್ಲ, ಕ್ಷೇತ್ರದ ಅಭಿವೃದ್ದಿಯ ನಿಟ್ಟಿನಲ್ಲಿ, ಇಲ್ಲಿ ಯಾವುದೇ ರಾಜಕೀಯ ತರಬೇಡಿ ಎಂದರು. ತಾನು ಹೋಗಿದ್ದ ಹಳ್ಳಿಗಳಿಗೆ ಹೋಲಿಸಿದ ಈ ಗ್ರಾಮದಲ್ಲಿ ಮಾತ್ರ ಮಹಿಳೆಯರು ನಿವೇಶನಕ್ಕಾಗಿ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಾರೆ, ಇವರಿಗೆ ಇದುವರೆಗೆ ನಿವೇಶನ ನೀಡದಿರುವುದು ಇಲ್ಲಿನ ಅಧಿಕಾರಿಗಳು ಯಾವ ರೀತಿ ತಮ್ಮ ಕಾರ್ಯನಿರ್ವಹಿಸಿದ್ದಾರೆ ಎಂಬುದನ್ನು ಎತ್ತಿಹಿಡಿಯುತ್ತಿದೆ.
ಒಬ್ಬ ಸಂಸದರಿಗೆ ಗ್ರಾಮಕ್ಕೆ ಅವಶ್ಯಕ ಸೌಲಭ್ಯಗಳು ಬೇಕೆಂದು ಅರ್ಜಿಸಲ್ಲಿಸುವುದು ಸಹಜ ಆದರೆ ಈ ಗ್ರಾಮದಲ್ಲಿ ನಿವೇಶನಕ್ಕಾಗಿ ಅರ್ಜಿಗಳು ಬಂದಿರುವುದು ವಸತಿರಹಿತರ ಸಮಸ್ಯೆ ಬಿಂಬಿಸುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಜಾಗದ ಜೊತೆಗೆ ಅವಶ್ಯಕ ಮತ್ತಷ್ಟು ಜಾಗವನ್ನು ಖಾಸಗಿಯವರಿಂದ ಖರೀದಿಸುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರಲ್ಲದೆ, ಅದಕ್ಕೆ ತಗುಲುವ ವೆಚ್ಚವನ್ನು ನೀಡುವುದಾಗಿ ತಿಳಿಸಿದರು.
ಒಬ್ಬ ಸಂಸದ ದಿಲ್ಲಿಯಿಂದ ಹಳ್ಳಿವರೆಗೆ ಹೋಗಿ ಜನರ ಸಮಸ್ಯೆಗಳನ್ನು ಆಲಿಸಿ ಹೇಗೆ ಬಗೆಹರಿಸಬಹುದೆಂಬುದನ್ನು ತೋರಿಸಿ, ಒಂದು ಸಾಧನೆ ಮಾಡಬೇಕೆಂದು ತಾವು ಈ ಕಾರ್ಯ ಕೈಗೊಂಡಿರುವುದಾಗಿ ತಿಳಿಸಿದರು. ಸಂಸದರಿಗೆ ಕೊಟ್ಟ ಅರ್ಜಿ ಕಾಟಾಚಾರಕ್ಕೆ ಎಂಬ ಮನೋಭಾವ ಮೂಡಿಸಿಕೊಳ್ಳಬೇಡಿ, ನಿಮ್ಮಗಳ ಕುಂದುಕೊರತೆಗಳ ನಿವಾರಣೆಗಾಗಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಂಸದರ ಕೊಠಡಿಯನ್ನು ತೆರೆದಿದ್ದು ತಾನು ಅಲ್ಲೇ ಲಭ್ಯವಿರುವುದಾಗಿ ಇರುವುದಾಗಿ ಹಾಗೂ ತಾವಿಲ್ಲದ ವೇಳೆ ಅರ್ಜಿಯನ್ನು ನೀಡಿ ಬಂದಲ್ಲಿ ಅದನ್ನು ತಾವು ಗಮನಿಸಿ ಪರಿಹರಿಸುವುದಾಗಿ ತಿಳಿಸಿದರು.
ಒಟ್ಟಾರೆ ಗ್ರಾಮಕ್ಕೆ ತಾಲ್ಲೂಕು ವiಟ್ಟದ ಅಧಿಕಾರಿಗಳ ತಂಡದೊಂದಿಗೆ ಬಂದ ಸಂಸದರಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು , ಸಮಸ್ಯೆಗಳ ಸುರಿಮಳೆಗೈದು ನೂರಾರು ಅರ್ಜಿಗಳು ಸಲ್ಲಿಕೆಯಾದವು.
ಈ ವೇಳೆ ತಹಶೀಲ್ದಾರ್ ಕಾಮಾಕ್ಷಮ್ಮ, ಇಓ ಕೃಷ್ಣಮೂರ್ತಿ, ಕಂದಾಯ ಇಲಾಖೆಯ ಸತ್ಯನಾರಾಯಣ್,ಹನುಮತಪ್ಪ, ಕೃಷಿ ಇಲಾಖೆಯ ನೂರುಲ್ಲಾ, ಶಿಕ್ಷಣ ಇಲಾಖೆಯ ಸಾಚಿ ನಾಗೇಶ್, ಮುಖಂಡರಾದ ಸಾಸಲುಸತೀಶ್, ಸಿದ್ರಾಮಣ್ಣ , ಕೃಷ್ಣೇಗೌಡ,ಅಶೋಕ್, ಗ್ರಾಮಸ್ಥರಾದ ಶಿವಕುಮಾರ್,ಯೋಗೀಶ್,ಈಶ್ವರಯ್ಯ, ಬಸವನಗುಡಿ ಕುಮಾರ್, ಶಾಂತಪ್ಪ, ನಟರಾಜ್, ಭದ್ರೇಶ್,ಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ